ಹೊಸ ವರ್ಷದ ಉನ್ಮಾದಕ್ಕೆ ನಟಸಾರ್ವಭೌಮನ ಸಾಥ್!

Picture of Cinibuzz

Cinibuzz

Bureau Report


ಇನ್ನೇನು ಕೆಲವೇ ಘಂಟೆಗಳಲ್ಲಿ ಹೊಸಾ ವರ್ಷ ಕಣ್ತೆರೆಯಲಿದೆ. ಹಳತನ್ನು ಬೀಳ್ಕೊಟ್ಟು ಹೊಸತನ್ನು ಎದುರುಗೊಳ್ಳೋ ಸಂಭ್ರಮಕ್ಕೆ ಪುನೀತ್ ರಾಜ್‌ಕುಮಾರ್ ನಟಸಾರ್ವಭೌಮ ಚಿತ್ರದ ಹಾಡೊಂದರ ಮೂಲಕ ಜೊತೆಯಾಗಿದ್ದಾರೆ. ಎಣ್ಣೆ ಹೊಡೆಯೋರ ಮನಗೆದ್ದ, ಆ ಸಂಭ್ರಮವನ್ನು ಹೆಚ್ಚಿಸಿದ, ಹುಚ್ಚೆದ್ದು ಕುಣಿಯುವಂತೆ ಮಾಡಿಡಿದ ಹಾಡುಗಳು ಸಾಕಷ್ಟಿವೆ. ಆ ಸಾಲಿಗೆ ಸೇರುವಂಥಾ ಸಾಂಗೊಂದು ನಟಸಾರ್ವಭೌಮ ಚಿತ್ರದ ಕಡೆಯಿಂಣದ ಬಿಡುಗಡೆಯಾಗಿದೆ.

ನಿರ್ದೇಶಕ ಪವನ್ ಒಡೆಯರ್ ಹೊಸಾ ವರ್ಷದ ಸಂಭ್ರಮ ಹೆಚ್ಚಿಸಲೆಂದೇ ನಟಸಾರ್ವಭೌಮದ ಈ ಎಣ್ಣೆ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡನ್ನು ಬರೆದಿರುವವರು ಯೋಗರಾಜ ಭಟ್. ಏಳೂವರೆ ಆಯ್ತು ಅಂದ್ರೆ ತುಟಿ ಒಣಗುತ್ತೆ ಅಂತ ಶುರುವಾಗುವ ಈ ಹಾಡನ್ನು ವಿಜಯ್‌ಪ್ರಕಾಶ್ ಹಾಡಿದ್ದಾರೆ.

ಈ ಹಾಡಂತೂ ಈ ಬಾರಿ ಹೊಸಾ ವರ್ಷದ ಉನ್ಮಾದವನ್ನು ಮತ್ತಷ್ಟು ಉದ್ದೀಪಿಸೋದರಲ್ಲಿ ಯಾವ ಸಂಶಯವೂ ಇಲ್ಲ. ಇದಕ್ಕೆ ಡಿ ಇಮ್ಮಾನ್ ಸಂಗೀತ ನೀಡಿದ್ದಾರೆ. ಡ್ಯಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಬಹು ಕಾಲದ ನಂತರ ಪುನೀತ್ ಈ ಹಾಡಿಗೆ ಅಭಿಮಾನಿಗಳೆಲ್ಲ ಹುಚ್ಚೇಳುವಂತೆ ಹೆಜ್ಜೆ ಹಾಕಿದ್ದಾರಂತೆ. ನಟಸಾರ್ವಭೌಮ ಚಿತ್ರದಲ್ಲಿ ಒಟ್ಟು ನಾಲಕ್ಕು ಹಾಡುಗಳಿವೆ. ಒಂದೊಂದೂ ಬೇರೆ ವೆರೈಟಿಯವಂತೆ. ಈ ಆಡಿಯೋ ಲಾಂಚ್ ಕಾರ್ಯಕ್ರಮ ಜನವರಿ ಐದರಂದು ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ನಡೆಯಲಿದೆ. ಆದರೆ ಹೊಸಾ ವರ್ಷದ ಮಜಾ ಹೆಚ್ಚಿಸಲೆಂದೇ ಒಂದು ಹಾಡನ್ನು ಮುಂಗಡವಾಗಿ ಬಿಡುಗಡೆ ಮಾಡಲಾಗಿದೆ.

#

ಇನ್ನಷ್ಟು ಓದಿರಿ

Scroll to Top