ಪ್ರೀತೀಲಿ ಪಾಸ್ ಆಗ್ಬೇಕಂದ್ರೆ ಪಡ್ಡೆಹುಲಿ ಸಾಂಗ್ ಕೇಳಿ! ಪ್ರೇಮಿಗಳ ದಿನಕ್ಕಿದು ಭರ್ಜರಿ ಗಿಫ್ಟು!

Picture of Cinibuzz

Cinibuzz

Bureau Report


ಈಗ ಪಡ್ಡೆಹುಲಿ ಚಿತ್ರದ ಹಾಡುಗಳ ಹವಾ ಚಾಲ್ತಿಯಲ್ಲಿದೆ. ಮೊನ್ನೆ ಬಿಡುಗಡೆಯಾಗಿದ್ದ ಹಾಡು ಲಕ್ಷಗಟ್ಟಲೆ ವೀಕ್ಷಣೆ ಪಡೆಯೋ ಮೂಲಕ ಯೂಟ್ಯೂಬ್ ಟ್ರೆಂಡಿಂಗ್‌ನಲ್ಲಿದೆ. ಇದೀಗ ಪ್ರೇಮಿಗಳ ದಿನಕ್ಕೆ ಸಮಸ್ತ ಪ್ರೇಮಿಗಳಿಗೂ ಸಾಥ್ ನೀಡುವಂಥಾ ವ್ಯಾಲೆಂಟೈನ್ಸ್ ಡೇ ಸ್ಪೆಷಲ್ ಹಾಡೊಂದನ್ನು ಅನಾವರಣಗೊಳಿಸಲು ತಯಾರಿ ನಡೆದಿದೆ!

ಈ ವಿಶೇಷವಾದ ಹಾಡನ್ನು ಇದೇ ಫೆಬ್ರವರಿ ಹನ್ನೊಂದರಂದು ಸಂಜೆ ಏಳು ಘಂಟೆಗೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ವೀಡಿಯೋ ಸಾಂಗಲ್ಲಿ ಪ್ರೇಮಿಗಳ ದಿನಕ್ಕೆ ಹೇಗೆ ತಯಾರಾಗಬೇಕೆಂಬ ಯಶಸ್ವೀ ಪ್ರೇಮಸೂತ್ರವಿದೆಯಂತೆ. ಇದನ್ನ ನೋಡಿ, ಕೇಳಿ ಹೊಸಾ ಹುಮ್ಮಸ್ಸಿನಿಂದ ಅಖಾಡಕ್ಕಿಳಿದರೆ ಪ್ರೇಮ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಗ್ಯಾರಂಟಿ ಎಂಬ ಭರವಸೆಯನ್ನೂ ಚಿತ್ರತಂಡ ಕೊಟ್ಟಿದೆ!

ಗುರುದೇಶಪಾಂಡೆ ಈ ವರೆಗೆ ಬಿಡುಗಡೆಯಾಗಿರೋ ಎರಡು ಹಾಡುಗಳನ್ನೂ ಹಿಟ್ ಆಗುವಂತೆಯೇ ರೂಪಿಸಿದ್ದಾರೆ. ಇದೀಗ ಯುವ ಆವೇಗದ, ಪ್ರೀತಿ ತುಂಬಿರೋ ಹಾಡೊಂದನ್ನೂ ರೆಡಿ ಮಾಡಿದ್ದಾರೆ. ಇದು ಪಡ್ಡೆಹುಲಿಗೆ ಮತ್ತೊಂದು ದಿಕ್ಕಿನಲ್ಲಿ ಮೈಲೇಜು ನೀಡೋ ಲಕ್ಷಣಗಳೂ ಇದ್ದಾವೆ. ಪ್ರೇಮಿಗಳ ದಿನಕ್ಕೆ ಎರಡು ದಿನ ಮುಂಚಿತವಾಗಿಯೇ ಈ ಹಾಡು ಬಿಡುಗಡೆಯಾಗೋದರಿಂದ ಅದನ್ನು ನೋಡಿ, ಪ್ರೇಮಸೂತ್ರಗಳನ್ನ ಕರಗತ ಮಾಡಿಕೊಂಡು ಅಖಾಡಕ್ಕಿಳಿಯೋ ಸದಾವಕಾಶ ಪ್ರೇಮಿಗಳಿಗೆ ಸಿಕ್ಕಿದೆ!

#

ಇನ್ನಷ್ಟು ಓದಿರಿ

Scroll to Top