ಫೈವ್ ಸ್ಟಾರ್ ಫಿಲಂಸ್ ಲಾಂಛನದಲ್ಲಿ ನಂದಕುಮಾರ್ ಎನ್., ಅರವಿಂದ ಮೂರ್ತಿ ಟಿ.ಎಸ್., ರಾಧಾಕೃಷ್ಣ ಸಿ.ಎಸ್., ಕಿಶೋರ್ ಮೇಗಳ ಮನೆ ನಿರ್ಮಿಸಿರುವ ಆಪರೇಷನ್ ನಕ್ಷತ್ರ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದು ಪಕ್ಕಾ ಸಸ್ಪೆನ್ಸ್ ಚಿತ್ರ. ನಾವು ಬೇರೆಯವರಿಗೆ ಮೋಸ ಮಾಡಿದರೆ, ನಮಗೆ ಮತ್ತೊಬ್ಬರು ಯಾವ ರೀತಿಯಲ್ಲಿ ಮೋಸ ಮಾಡುತ್ತಾರೆ ಎಂದು ಈ ಚಿತ್ರದ ಮೂಲಕ ಹೇಳ ಹೊರಟಿದ್ದಾರೆ ನಿರ್ದೇಶಕ ಮಧುಸೂಧನ್ ಕೆ.ಆರ್. ಚಿತ್ರಕ್ಕೆ ಕಥೆ ಚಿತ್ರಕತೆ ಕೂಡಾ ಇವರೇ ರಚಿಸಿದ್ದಾರೆ.

ಚಿತ್ರಕ್ಕೆ ವೀರಸಮರ್ಥ ಸಂಗೀತ, ಶಿವ ಸೀನ ಛಾಯಾಗ್ರಹಣ, ಮಧುಸೂಧನ್ ಸಂಭಾಷಣೆ, ವಿಜಯ ಭರಮಸಾಗರ ಸಾಹಿತ್ಯ, ಅರ್ಜುನ್ ಕಿಟ್ಟು ಸಂಕಲನ, ಅಲ್ಟಿಮೇಟ್ ಶಿವು ಸಾಹಸ, ಕಂಬಿ ರಾಜು ನೃತ್ಯ ನಿರ್ದೇಶನವಿದೆ. ನಿರಂಜನ್ ಒಡೆಯರ್, ಅದಿತಿ ಪ್ರಭುದೇವ, ಯಜ್ಞಾ ಶೆಟ್ಟಿ, ಲಿಖಿತ್ ಸೂರ್ಯ, ಶ್ರೀನಿವಾಸ ಪ್ರಭು, ದೀಪಕ್ ರಾಜ್ ಶೆಟ್ಟಿ, ಗೋವಿಂದೇಗೌಡ, ವಿಕ್ಟರಿ ವಾಸು, ಪ್ರಶಾಂತ್ ನಟನ, ವಿಜಯಲಕ್ಷ್ಮಿ, ಅರವಿಂದ ಮೂರ್ತಿ ಟಿ.ಎಸ್. ಮುಂತಾದವರ ತಾರಾಬಳಗವಿದೆ.











































