ಎಸ್.ಎಸ್.ಕೆ.ಬಿ ಪ್ರೊಡಕ್ಷನ್ ಲಾಂಛನದಲ್ಲಿ ವೆಂಕಟೇಶ್ ಕುಮಾರ್ ಡಿ ನಿರ್ಮಾಣದ ಇಂತಿ ನಿಮ್ಮ ಭೈರಾ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಿನಿಮಾವನ್ನು ಕೆ.ಜೆ. ಚಿಕ್ಕು ನಿರ್ದೆಶನ ಮಾಡಿದ್ದಾರೆ. ವಯೋವೃದ್ಧರು ಹಾಗೂ ಯುವ ಪೀಳಿಗೆಗಳ ಸುತ್ತ ನಡೆಯುವ ಕಥಾವಸ್ತು ಇಂತಿ ನಿಮ್ಮ ಭೈರಾ.

ಈ ಚಿತ್ರಕ್ಕೆ ಸಂತೋಷ್ ಪಾಂಡಿಯನ್ ಛಾಯಾಗ್ರಹಣ, ಎಸ್. ನಾಗು ಸಂಗೀತ, ಕವಿರಾಜ್ ಮತ್ತು ನಾಗೇಂದ್ರ ಪ್ರಸಾದ್ ಸಾಹಿತ್ಯ, ಕಿರಣ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ. ಇನ್ನು ತಾರಾಂಗಣದಲ್ಲಿ ಆರ್ಯನ್ ವೆಂಕಟೇಶ್, ಪ್ರಗತಿ, ಬೆಂಗಳೂರು ನಾಗೇಶ್, ಸುನೇತ್ರ ಪಂಡಿತ್, ಸಂಜು, ಬಸಯ್ಯ, ಅಪೂರ್ವ, ಅಂಜನಪ್ಪ, ವಟಾರ ಮಲ್ಲೇಶ್, ರಾಘು ರಾಮನಕೊಪ್ಪ, ಗಿರೀಶ್ ಮುಂತಾದವರು ಅಭಿನಯಿಸಿದ್ದಾರೆ.











































