ಪಂಚ ಭಾಷೆಗಳಲ್ಲಿ ಮಿಂಚಲಿದ್ದಾರೆ ರಾಧಿಕಾ ಕುಮಾರಸ್ವಾಮಿ!

Picture of Cinibuzz

Cinibuzz

Bureau Report

ಚಂದನವನದ ಮಿಲ್ಕಿ ಬ್ಯೂಟಿ ರಾಧಿಕಾ ಕುಮಾರಸ್ವಾಮಿ ರುದ್ರ ತಾಂಡವ ಸಿನಿಮಾದ ನಂತರ ತೆರೆ ಮೇಲೆ ಬಂದಿರಲೇ ಇಲ್ಲ. ಸದ್ಯ ದಮಯಂತಿ ಸಿನಿಮಾ ಮೂಲಕ ಮತ್ತೆ ಕಂಬ್ಯಾಕ್ ಆಗಿರುವ ಅವರು ಇದೇ ತಿಂಗಳು ದಮಯಂತಿ ಟೀಸರ್ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ.

ಈಗಾಗಲೇ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ದಮಯಂತಿ ಬಿಡುಗಡೆಗೆ ಕೌಂಟ್ ಶುರುವಾಗಿದೆ. ವಿಶೇಷವೆಂದರೆ ದಮಯಂತಿಯಾಗಿ ರಾಧಿಕಾ ಕುಮಾರ ಸ್ವಾಮಿ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಪಂಚ ಭಾಷೆಗಳಲ್ಲಿ ಮಿಂಚಲಿದ್ದಾರೆ. ಅಂದಹಾಗೆ ಮಲಯಾಳಂ, ಹಿಂದಿ ಭಾಷೆಗೆ ದಮಯಂತಿಯನ್ನು ಡಬ್ ಮಾಡಲಾಗಿದ್ದು, ತಮಿಳು ಮತ್ತು ತೆಲುಗು ಭಾಷೆಯ ವರ್ಷನನ್ನು ಡಬ್ ಮಾಡದೇ ಶೂಟಿಂಗ್ ಮಾಡಿಕೊಂಡಿರುವುದು ವಿಶೇಷವಾಗಿದೆ. ಪಂಚ ಭಾಷೆಗಳಲ್ಲಿ ರಿಲೀಸ್ ಆಗಲಿರುವ ದಮಯಂತಿಯ ಟೀಸರನ್ನು ಆಯಾ ಭಾಷೆಯ ಪ್ರಮುಖ ಸ್ಟಾರ್ಗಳ ಅಮೃತ ಹಸ್ತದಿಂದ ರಿಲೀಸ್ ಮಾಡಿಸಲು ಚಿತ್ರತಂಡ ನಿರ್ಧರಿಸಿದೆ. ನವರಸನ್ ಸಾರಥ್ಯದಲ್ಲಿ ದಮಯಂತಿ ಮೂಡಿಬಂದಿದ್ದು, ರಾಧಿಕಾ ಕುಮಾರಸ್ವಾಮಿಯವರೇ ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಎಲ್ಲ ಅಂದುಕೊಂಡಂತಾದರೆ ಸೆಪ್ಟೆಂಬರ್ ನಲ್ಲಿ ದಮಯಂತಿ ಅಬ್ಬರ ಪಕ್ಕಾ..

ಇನ್ನಷ್ಟು ಓದಿರಿ

Scroll to Top