ಸೈನೈಡ್ ಮಲ್ಲಿಕಾ ಪೋಷಾಕಿನಲ್ಲಿ ಪಂಗನಾಮದ ಹುಡುಗಿ!

Picture of Cinibuzz

Cinibuzz

Bureau Report

ಪಂಗನಾಮ ಸಿನಿಮಾದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ಸಂಜನಾ ನಂತರ ಚಿಲ್ರೆ ಶೋಕಿ, ವರ್ತಮಾನ, ಕಲಬೆರಕೆ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಸೈನೈಡ್ ಮಲ್ಲಿಕಾ ಎಂಬ ಮಹಿಳಾ ಪ್ರಧಾನ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರದ ಮೋಷನ್ ಫೋಸ್ಟರ್ ರಿಲೀಸ್ ಆಗಲಿದೆ. ನೈಜ ಘಟನೆಗಳಿಂದ ಪ್ರೇರಿತವಾದ ಈ ಚಿತ್ರವು ಭಾರತದ ಮೊದಲ ಮಹಿಳಾ ಸೀರ್ಯಲ್ ಕಿಲ್ಲರ್ ಜೀವನದ ಕುರಿತಾಗಿದೆ.

ಬೆಂಗಳೂರಿನ ದೇವಸ್ಥಾನಗಳಿಗೆ ಬರುತ್ತಿದ್ದ ಶ್ರೀಮಂತ ಕುಟುಂಬ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕಿ ಅವರೊಂದಿಗೆ ಸ್ನೇಹ ಬೆಳೆಸಿಕೊಂಡು ನಂತರ ಸಮಯ ನೋಡಿ ಕೊಲೆ ಮಾಡಿ ಅವರ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದಳು. ಇದೇ ಎಳೆಯನ್ನು ಹೊಂದಿರುವ ಹೊಸ ಸಿನಿಮಾ ಸೈನೈಡ್ ಮಲ್ಲಿಕಾ. ದಂಡುಪಾಳ್ಯದ ನಂತರ ರಕ್ತಸಿಕ್ತ ಕಥಾಹಂದರವನ್ನು ಹೇಳಲು ಸೈನೈಡ್ ಮಲ್ಲಿಕಾ ಬರಲಿದ್ದು, ಈಗಾಗಲೇ  ಪ್ರೇಕ್ಷಕರಲ್ಲಿ ಬಹಳಷ್ಟು ಕುತೂಹಲವನ್ನು ಹುಟ್ಟುಹಾಕಿದ್ಧಾಳೆ.

ಇನ್ನಷ್ಟು ಓದಿರಿ

Scroll to Top