ಬಜಾರ್ ಸಿನಿಮಾದ ನಂತರ ನಿರ್ದೇಶಕ ಸಿಂಪಲ್ ಸುನಿ ಶರಣ್ ನಾಯಕತ್ವದ ಅವತಾರ ಪುರುಷ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಪೋಸ್ಟರ್ ಮೂಲಕವೇ ಸದ್ದು ಮಾಡುತ್ತಿರುವ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಸಹ ನಟಿಸಲಿದ್ದಾರೆಂಬ ಸುದ್ದಿ ಹೊರಬಿದ್ದಿದೆ. ಹೌದು ಕಿಟ್ಟಿ ಮೂರು ವಿಭಿನ್ನ ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಹಿಂದೆ ಸುನಿ ನಿರ್ದೇಶನದ ಬಹುಪರಾಕ್ ಸಿನಿಮಾದಲ್ಲಿ ನಟಿಸಿದ್ದ ಕಿಟ್ಟಿ ಈಗ ಮತ್ತೊಂದು ವಿಭಿನ್ನ ಸಿನಿಮಾದ ಮೂಲಕ ಜತೆಯಾಗಿದ್ದಾರೆ. ಇಂದು ಕಿಟ್ಟಿ ಹುಟ್ಟುಹಬ್ಬದ ಪ್ರಯುಕ್ತ ಅವತಾರ ಪುರುಷದ ಹೊಸ ಪೋಸ್ಟರ್ ರಿಲೀಸ್ ಆಗಿದ್ದು, ಪೋಸ್ಟರ್ ನಲ್ಲಿ ಕಿಟ್ಟಿ ವಿಭಿನ್ನ ಲುಕ್ ನಲ್ಲಿ ಗಮನಸೆಳೆದಿದ್ದಾರೆ.
https://twitter.com/PUSHKARA11/status/1148159519429521408
ನಿರ್ದೇಶಕ ಸಿಂಪಲ್ ಸುನಿ ಎರಡನೇ ಸಿನಿಮಾ ‘ಬಹುಪರಾಕ್’ ಈ ಚಿತ್ರದಲ್ಲಿ ನಾಯಕನಾಗಿದ್ದು, ಶ್ರೀನಗರ ಕಿಟ್ಟಿ. ಆ ಸಿನಿಮಾದಲ್ಲಿ ಕಿಟ್ಟಿ ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ‘ಬಹುಪರಾಕ್’ ನಂತರ ಮತ್ತೆ ಸಿಂಪಲ್ ಸುನಿ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಸುನಿ ನಿರ್ದೇಶನದ ಚಿತ್ರದಲ್ಲಿ ಕಿಟ್ಟಿ ನಾಯಕನಾಗಿಲ್ಲ. ಬದಲಿಗೆ ಒಂದು ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಈ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣ ಮಾಡುತ್ತಿದ್ದು, ಚರಣ್ ರಾಜ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಶರಣ್ ಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಳ್ಳಲಿದ್ಧಾರೆ.











































