ಅದ್ದೂರಿಯಾಗಿ ಬಿಡುಗಡೆಯಾಯ್ತು ಕುರುಕ್ಷೇತ್ರದ ಆಡಿಯೋ!

Picture of Cinibuzz

Cinibuzz

Bureau Report

ದರ್ಶನ್ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರದ ಆಡಿಯೋ ಬಿಡುಗಡೆ ಸಮಾರಂಭ ನಿನ್ನೆ ಅದ್ದೂರಿಯಾಗಿ ನೆರವೇರಿತು. ಬೆಂಗಳೂರಿನ ಕೋರಮಂಗಲದಲ್ಲಿ ದೊಡ್ಡ ಕಾರ್ಯಕ್ರಮದ ಮೂಲಕ ಆಡಿಯೋ ರಿಲೀಸ್ ಕೂಡ ಆಯಿತು. ನಟ ದರ್ಶನ್, ಹರಿಪ್ರಿಯಾ, ಶಶಿಕುಮಾರ್, ಸೋನು ಸೂದ್ ಸೇರಿದಂತೆ ಕಲಾವಿದರ ದಂಡೇ ಕುರುಕ್ಷೇತ್ರದ ಆಡಿಯೋ ಬಿಡುಗಡೆಗೆ ಸಾಕ್ಷಿಯಾಗಿತ್ತು.

 

ಇನ್ನು ಸಿನಿಮಾದ ಚೊಚ್ಚಲ ಹಾಡು ಸಾಹೋರೇ ಸಾಹೋ ಮೂಲಕವೇ ಯಜಮಾನನ್ನು ವೇದಿಕೆಗೆ ಸ್ವಾಗತಿಸಲಾಯಿತು. ಆಡಿಯೋ ಜತೆಗೆ ಕುರುಕ್ಷೇತ್ರದ ಟ್ರೇಲರ್ ಕೂಡ ಬಿಡುಗಡೆಯಾಯಿತು. ಇನ್ನು ಆಡಿಯೋ ಬಿಡುಗಡೆ ಕಾರ್ಯಕ್ರಮ ಜೀ ಕನ್ನಡ ವಾಹಿನಿಯಲ್ಲಿ ಸದ್ಯದಲ್ಲಿಯೇ ಪ್ರಸಾರವಾಗಲಿದೆ.

ಇನ್ನಷ್ಟು ಓದಿರಿ

Scroll to Top