ಬಾಲಿವುಡ್ ವೆಬ್ ಸಿರೀಸ್ ನಲ್ಲಿ ಕನ್ನಡದ ಲಾಸ್ಯ ನಾಗ್!

Picture of Cinibuzz

Cinibuzz

Bureau Report

ಮ್ಯಾನ್ ಬೂಕರ್ ಅವಾರ್ಡ್ ಪುರಸ್ಕೃತ ಸಲ್ಮಾನ್ ರಶ್ದಿ ಅವರ ಮಿಡ್ ನೈಟ್ ಚಿಲ್ಡ್ರನ್ ಕಾದಂಬರಿ ವೆಬ್ ಸೀರಿಸ್ ಆಗುತ್ತಿರೋದು ಎಲ್ಲರಿಗೂ ತಿಳಿದ ವಿಚಾರವೇ. ವಿಶೇಷವೆಂದರೆ ಆ ವೆಬ್ ಸಿರೀಸ್ ನಲ್ಲಿ ಕನ್ನಡದ ನಟಿ ಲಾಸ್ಯ ನಾಗ್ ನಟಿಸುತ್ತಿದ್ದಾರೆ.

ಹೌದು  ಬಹುಭಾಷೆಗಳಲ್ಲಿ ಗುರುತಿಸಿಕೊಂಡಿರುವ ಲಾಸ್ಯ ಸದ್ಯ ಬಾಲಿವುಡ್ ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಲಾಸ್ಯ ನಾಗ್ ತಮಿಳುನಾಡು ಮೂಲದ ಪರಿ ಅಯ್ಯರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಬಿಬಿಸಿ (ಬ್ರಿಟಿಷ್ ಬ್ರಾಡ್ ​ಕಾಸ್ಟಿಂಗ್ ಕಂಪನಿ) ಮಿಡ್​ನೈಟ್ ಚಿಲ್ಡನ್’ಗೆ ಬಂಡವಾಳ ಹಾಕುತ್ತಿದ್ದು, 1947ರ ಸ್ವಾತಂತ್ರ್ಯ ನಂತರದ ದಿನಗಳನ್ನೇ ವೆಬ್​ ಸಿರೀಸ್ ರೂಪದಲ್ಲಿ ಕಟ್ಟಿಕೊಡಲಾಗುತ್ತಿದೆ. 2020ರ ಡಿಸೆಂಬರ್​ನಲ್ಲಿ ಈ ವೆಬ್ ಸಿರೀಸ್ ಬಿಡುಗಡೆ ಆಗಲಿದೆ.

ಇನ್ನಷ್ಟು ಓದಿರಿ

Scroll to Top