ಕನ್ನಡದ ಹೆಬ್ಬುಲಿ ಚಿತ್ರದಲ್ಲಿ ನಟಿಸಿದ್ದ ಅಮಲಾ ಪೌಲ್ ನಟನೆಯ ತಮಿಳಿನ ಆಡೈ ಸಿನಿಮಾ ಈಗಾಗಲೇ ಬಹಳಷ್ಟು ಸದ್ದು ಮಾಡುತ್ತಿದೆ. ಈ ಹಿಂದೆ ಚಿತ್ರದ ಫಸ್ಟ್ ಲುಕ್ ನಲ್ಲಿ ಬೆತ್ತಲೆಯಾಗಿ ಕಾಣಿಸಿಕೊಂಡು ನ್ಯೂಸಾಗಿದ್ದ ಅಮಲಾ ಇದೀಗ ಹೊಸ ಟ್ರೇಲರ್ ನಲ್ಲಿ ಮತ್ತೊಮ್ಮೆ ಸೌಂಡು ಮಾಡುತ್ತಿದ್ದಾರೆ.
ಯೆಸ್.. ಸದ್ಯ ಚಿತ್ರತಂಡ ರಿಲೀಸ್ ಮಾಡಿರುವ ಟ್ರೇಲರ್ ನಲ್ಲಿ ಅಮಲಾ ವಿ.ಜೆ. ರಮ್ಯಾರೊಂದಿಗೆ ಲಿಪ್ ಲಾಕ್ ಮಾಡಿದ್ದಾರೆ. ಜತೆಗೆ ಸಿಗರೇಟು, ಮೋಜು, ಮಸ್ತಿ ಮಾಡುತ್ತಾ ಎಂಜಾಯ್ ಮಾಡುವ ಹುಡುಗಿಯಾಗಿಯೂ ಅಮಲಾ ಕಾಣಿಸಿಕೊಂಡಿದ್ದಾರೆ. ಟ್ರೇಲರನ್ನು ನೋಡಿದ ತಮಿಳು ಪಂಡಿತರು ಆಡೈ ಸಲಿಂಗ ಸಂಬಂಧದ ಸಿನಿಮಾವಾಗಿರಬಹುದೇ ಎಂದೂ ಮಾತನಾಡಿಕೊಳ್ಳುತ್ತಿದ್ದಾರೆ.











































