ಸಲಗಕ್ಕೆ ಜಾಲಿ ಬಾಸ್ಟಿಯನ್ ಸಾಥ್!

Picture of Cinibuzz

Cinibuzz

Bureau Report

ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಿನಿಮಾ ಸಲಗ. ಮೇಕಿಂಗ್ ನಿಂದಲೇ ನಿರೀಕ್ಷೆ ಹುಟ್ಟುಹಾಕಿದ್ದ ಸಲಗ ಮೊದಲ ಹಂತದ ಶೂಟಿಂಗ್ ಮುಗಿಸಿಕೊಂಡಿದ್ದು ಜುಲೈ 17 ರಿಂದ ಎರಡನೇ ಹಂತದ ಶೂಟಿಂಗ್ ಸಹ ಆರಂಭವಾಗಲಿದೆ.

ಮಾಸ್ ಪ್ರೇಕ್ಷಕರನ್ನೇ ಹೆಚ್ಚು ಹೊಂದಿರುವ ಬ್ಲಾಕ್ ಕೋಬ್ರಾ ವಿಜಯ್ ಅಂದ್ರೆ ಮಾಸ್ ಡೈಲಾಗು, ಮಾಸ್ ಫೈಟಿಂಗುಗಳಿಗೇನು ಬರವಿಲ್ಲ. ಈ ಮಧ್ಯೆ ಸಲಗ ಹೊಸ ಸುದ್ದಿಯೊಂದನ್ನು ಹರಿಬಿಟ್ಟಿದ್ದು, ಸಲಗ ಟೀಮಿಗೆ ಮಾಸ್ ಫೈಟ್ ಮಾಡಿಸೋಕೆ ಅಂತಾನೇ ಸೌತ್ ಇಂಡಿಯಾದ ಫೇಮಸ್ ಸ್ಟಂಟ್ ಮಾಸ್ಟರ್ ಜಾಲಿ ಬಾಸ್ಟಿಯನ್ ಎಂಟ್ರಿ ಆಗಿದ್ದಾರೆ. ಮೊದಲೇ ತಿಳಿಸಿದಂತೆ ಸಲಗ ಅಂಡರ್ ವರ್ಲ್ಡ್ ಬೇಸ್ಡ್ ಸಿನಿಮಾ ಆಗಿರೋದ್ರಿಂದ ಚಿತ್ರದಲ್ಲಿ ಫೈಟಿಂಗ್ ಸೀಕ್ವೆನ್ಸ್ ಗಳಿಲ್ಲವೆಂದರೆ ಹೇಗೆ.. ಅದಕ್ಕಾಗಿ ಸಲಗ ಟೀಮಿಗೆ ಮಾಸ್ ಫೈಟ್ ಗಳ ಪಟ್ಟುಗಳನ್ನು ತಿಳಿಸಿಕೊಡಲು ಜಾಲಿ ಬಾಸ್ಟಿಯನ್ ಮಾಸ್ಟರ್ ಸಲಗಕ್ಕೆ ಸಾಥ್ ಕೊಟ್ಟಿದ್ದಾರೆ.

ಇನ್ನಷ್ಟು ಓದಿರಿ

Scroll to Top