ಆಡೈ ಬೆತ್ತಲೆ ಪೋಸಿಗೆ ಅಮಲಾ ರಿಯಾಕ್ಷನ್!

Picture of Cinibuzz

Cinibuzz

Bureau Report

ಬಹುಭಾಷಾ ನಟಿ ಅಮಲಾ ಪೌಲ್ ಆಡೈ ಎಂಬ ತಮಿಳು ಸಿನಿಮಾದಲ್ಲಿ ಅಭಿನಯಿಸಿರೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಈಗಾಗಲೇ ಟೀಸರ್, ಫೋಸ್ಟರ್, ಟ್ರೇಲರ್ ಮೂಲಕ ಬಹಳಷ್ಟು ಸದ್ದು ಮಾಡುತ್ತಿರುವ ಆಡೈ ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ಈ ಚಿತ್ರದಲ್ಲಿ ಅಮಲಾ ಪೌಲ್ ಬೋಲ್ಡ್ ಯುವತಿ ಪಾತ್ರದಲ್ಲಿ ನಟಿಸಿದ್ದು, ಟ್ರೇಲರ್ ನಲ್ಲಿ ಅಮಲಾ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದರು. ಈ ಟ್ರೇಲರ್ ವೀಕ್ಷಿಸಿದ ಅಭಿಮಾನಿಗಳು ಫುಲ್ ಖುಷ್ ಆದರೆ, ಟ್ರೋಲಿಗರು ಅಮಲಾ ಕಾಲೆಳೆದಿದ್ದರು. ಆಗ ಅದ್ಯಾವುದಕ್ಕೂ ಕೇರ್ ಮಾಡದ ಅಮಲಾ ಸಂದರ್ಶನವೊಂದರಲ್ಲಿ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.

“ನಾನು ಆಡೈ ನಲ್ಲಿ ವಿಭಿನ್ನ ಪಾತ್ರವೊಂದನ್ನು ಚ್ಯೂಸ್ ಮಾಡಿಕೊಂಡಿದ್ದೇನೆ. ಚಿತ್ರದಲ್ಲಿ ನಶೆಯಲ್ಲಿ ನಾಪತ್ತೆಯಾಗುವ ಮಗಳ ಪಾತ್ರ ನನ್ನದು. ಈ ಮೊದಲು ನಾನು ಅತ್ಯಾಚಾರ ಸಂತ್ರಸ್ತೆ, ಹೋರಾಟ ಮಾಡುವ ಮಹಿಳೆ, ತಂಗಿ, ತಾಯಿಯ ಪಾತ್ರಗಳಲ್ಲಿಯೇ ನಟಿಸಿ ನಟಿಸಿ ಸಾಕಾಗಿದ್ದ ನನಗೆ ಹೊಸ ಪಾತ್ರಗಳ ನಿರೀಕ್ಷೆಯಿತ್ತು. ಆ ಕಾರಣಕ್ಕಾಗಿ ವಿಶೇಷ ಪಾತ್ರ ಎಂದು ಅನ್ನಿಸಿದ್ದಕ್ಕೆ ನಾನು ಆಡೈನಲ್ಲಿ ನಟಿಸಲು ಒಪ್ಪಿದ್ದು. ಅದಕ್ಕೆ ನನ್ನ ಯಾವ ತಕರಾರು ಇಲ್ಲ. ಸಿನಿಮಾವನ್ನು ಸಿನಿಮಾವಾಗಿ ಯಾಕೆ ನೋಡಬಾರದು” ಎಂದಿದ್ಧಾರೆ. ಆಡೈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಎ ಪ್ರಮಾಣ ಪತ್ರವನ್ನು ನೀಡಿದೆ. ಸಿನಿಮಾ ಸದ್ಯದಲ್ಲಿಯೇ ಬಿಡುಗಡೆಯಾಗುವ ಸಾಧ್ಯತೆಯೂ ಇದೆ.

ಇನ್ನಷ್ಟು ಓದಿರಿ

Scroll to Top