ಮಲೈಕಾ ಫೋಸಿಗೆ ಕಮೆಂಟಿಗರ ಕಿಂಡಲ್ಲು!

Picture of Cinibuzz

Cinibuzz

Bureau Report

ವಯಸ್ಸು ದೊಡ್ಡದಾದರೂ ಸಹ ಬಿ ಟೌನಿನ ಏಜ್ ಲೆಸ್ ಬ್ಯೂಟಿ ಮಲೈಕಾ ಅರೋರ. ಸದಾ ಪಡ್ಡೆ ಹೈಕಳು ಮಲೈಕಾ ಮೇಲೆ ಒಂದು ಕಣ್ಣಿಟ್ಟು ಆಕೆಯ ಚಲನ ವಲನಗಳನ್ನು ಗಮನಿಸುತ್ತಲೇ ಇರುತ್ತಾರೆ. ಅಲ್ಲದೇ ಸದಾ ಫೋಟೋಗೆ ಫೋಸ್ ಕೊಡುವ ಮಲೈಕಾ ಕೂಡಾ ಅಭಿಮಾನಿಗಳಿಗಾಗಿಯೇ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಈ ಮಧ್ಯೆ ಇತ್ತೀಚಿಗೆ ಮಲೈಕಾ ಶಾರ್ಟ್ ಡ್ರೆಸ್ಸು ಕಮೆಂಟಿಗರ ಕಣ್ಣು ಕೆಂಪಾಗಿಸಿದೆ.

ಯೆಸ್. ಮಲೈಕಾ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಲು ತೆರಳಿದ್ದರು. ಈ ವೇಳೆ ಅವರು ಕೆಲವು ಫೋಟೋಗಳಿಗೆ ಫೋಸ್ ಸಹ ನೀಡಿದ್ದರು. ಡೀಪ್ ನೆಕ್ ಇರೋ ಲಾಂಗ್ ಸ್ಕರ್ಟ್ ಕಮೆಂಟಿಗರ ನಿದ್ದೆಗೆಡಿಸಿದೆ. ಅಲ್ಲದೇ ಇಷ್ಟು ವರ್ಷ ವಯಸ್ಸಾಗಿದೆ ನಿನಗೆ ಇಂತಹ ಡ್ರೆಸ್ಸೆಲ್ಲಾ ಬೇಕಾ..? ಅಂತಾ ಮಲೈಕಾರ ಫೋಟೋಗಳಿಗೆ ಬರಪೂರ ನೆಗೆಟೀವ್ ಕಮೆಂಟುಗಳು ಬರಲು ಶುರುವಾಗಿದೆ. ಅಲ್ಲದೇ ನಿಮ್ಗೆ ಬೇರೆ ಕೆಲ್ಸಾ ಇಲ್ವಾ.. ಯಾವಾಗ್ಲೂ ಈ ತರಹ ಡ್ರೆಸ್​ ಹಾಕೊಂಡು, ಕ್ಯಾಮೆರಾಗಳಿಗೆ ಫೋಸ್​ ಕೊಡೋದೇ ನಿಮ್ಮ ಕೆಲಸನಾ..? ಯಾರಾದ್ರು ಇವಳಿಗೆ ಬಟ್ಟೆಕೊಡಿಸಿ..! ಅಂತೆಲ್ಲಾ ಕಮೆಂಟ್​ ಮಾಡುತ್ತಿದ್ದಾರೆ. ಇದ್ಯಾವುದಕ್ಕೂ ಡೋಂಟ್ ಕೇರ್ ಮಾಡದ ಮಲೈಕಾ ಕಾರ್ಯಕ್ರಮದಲ್ಲಿ ಏಂಜಾಯ್ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top