ತಾಪ್ಸಿ ಮೇಲೆ ಕಂಗನಾ ಸಿಸ್ಟರ್ ಕೆಂಗಣ್ಣು!

Picture of Cinibuzz

Cinibuzz

Bureau Report

ಈಗಾಗಲೇ ಕಂಗನಾ ರನಾವತ್ ಅಭಿನಯದ ಜಡ್ಜ್ ಮೆಂಟಲ್ ಹೈ ಕ್ಯಾ ಸಿನಿಮಾದ ಟ್ರೇಲರ್ ಸಾಕಷ್ಟು ಸದ್ದು ಮಾಡುತ್ತಿದೆ. ಈ ಮಧ್ಯೆ ನಟಿ ತಾಪ್ಸಿ ಪನ್ನು ಅವರ ಟ್ವೀಟಿಗೆ ಕಂಗನಾ ಸಹೋದರಿ ಕೆಂಗಣ್ಣು ಬೀರಿದ್ದಾರೆ.

ತಾಪ್ಸಿ ಪನ್ನು, ‘ದಿಸ್‌ ಈಸ್‌ ಸೋ ಕೂಲ್‌, ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ನೋಡಬೇಕಾದ ಸಿನಿಮಾ’ ಎಂದು ತಾಪ್ಸಿ ಟ್ವೀಟ್ ಮಾಡಿದ್ದಾರೆ. ಆದರೆ ಇದಕ್ಕೆ ರಂಗೋಲಿ ‘ಕೆಲವರು ಕಂಗನಾ ಅವರನ್ನು ಕಾಪಿ ಮಾಡಿಕೊಂಡೇ ತಮ್ಮ ಮನೆಯ ಬೇಳೆ ಬೇಯಿಸಿಕೊಂಡಿದ್ದಾರೆ. ಇದಕ್ಕಾಗಿ ಕಂಗನಾಳನ್ನು ಅವರು ಎಂದೂ ಹೊಗಳುವುದಿಲ್ಲ. ಬದಲಾಗಿ ಸಿನಿಮಾ ಕುರಿತು ಬರೆಯುವಾಗ ಕಂಗನಾ ಕುರಿತು ಉಲ್ಲೇಖ ಕೂಡ ಮಾಡಿಲ್ಲ. ತಾಪ್ಸಿ ನೀವು ಕಾಪಿ ಮಾಡುವುದನ್ನು ಬಿಡಬೇಕು’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

https://twitter.com/taapsee/status/1146411617162289152

ತಾಪ್ಸಿ ಪನ್ನು ಅವರ ಸ್ನೇಹಿತ ಹಾಗೂ ನಿರ್ದೇಶಕ ಅನುರಾಗ್‌ ಕಶ್ಯಪ್‌ ಈ ಟ್ವೀಟ್‌ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ರಂಗೋಲಿ ನೀವು ತುಂಬಾ ದೂರದ ಚಿಂತನೆ ಮಾಡಿದ್ದೀರಿ. ಹತಾಷೆಗೆ ಒಳಗಾಗಿ ಮಾತನಾಡಿದ್ದೀರಿ. ನೀವು ಏನು ಹೇಳುತ್ತಿದ್ದೀರಿ ನಿಜವಾಗಲೂ ನನಗೆ ಅರ್ಥ ಆಗುತ್ತಿಲ್ಲ. ನಿಮ್ಮ ಸಹೋದರಿ ಹಾಗೂ ತಾಪ್ಸಿ ಇಬ್ಬರ ಜೊತೆಗೂ ನಾನು ಕೆಲಸ ಮಾಡಿದ್ದೇನೆ. ಟ್ರೇಲರ್ ಹೊಗಳಿದ ಮೇಲೆ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ ಎಂದೇ ಅರ್ಥ. ಹೊಗಳಿಕೆಯಲ್ಲಿ ಕಂಗನಾ ಕೂಡ ಸೇರಿರುತ್ತಾರೆ’ ಎಂದು ತಾಪ್ಸಿ ಪರ ಮಾತನಾಡಿದ್ದಾರೆ. ಪ್ರಕಾಶ್‌ ಕೋವಲಮುಡಿ ನಿರ್ದೇಶನದ ‘ಜಡ್ಜ್‌ಮೆಂಟಲ್‌ ಹೈ ಕ್ಯಾ’ ಸಿನಿಮಾ ಜುಲೈ 26ರಂದು ತೆರೆಕಾಣಲಿದೆ.

ಇನ್ನಷ್ಟು ಓದಿರಿ

Scroll to Top