ದ್ವಿಭಾಷೆಗಳಲ್ಲಿ ರಾಂಧವ ರಿಲೀಸ್!

Picture of Cinibuzz

Cinibuzz

Bureau Report

ಸಿನಿಮಾ ಶುರುವಾಗಿನಿಂದಲೂ ಒಂದಿಲ್ಲೊಂದು ವಿಚಾರಗಳಿಂದ ಸುದ್ದಿಯಲ್ಲಿರುವ ಸಿನಿಮಾ ರಾಂಧವ. ನಟ ಭುವನ್ ಪೊನ್ನಣ್ಣ ರಾಂಧವದಲ್ಲಿ ರಾಣಾ, ರಾಬರ್ಟ್, ರಾಂಧವ ಎಂಬ ಮೂರು ಶೇಡಿನ ಪಾತ್ರಗಳಲ್ಲಿ ಪ್ರೇಕ್ಷಕರಿಗೆ ದರ್ಶನ ನೀಡಲಿದ್ದಾರೆ. ಇದೇ ತಿಂಗಳ 26ಕ್ಕೆ ರಾಂಧವ ರಿಲೀಸ್ ಆಗಲಿದೆ. ಬಿಡುಗಡೆಗೂ ರಾಂಧವ ಸೃಷ್ಟಿಸಿದ ಹೈಪಿಗೆ ಮನಸೋತು ಚಿತ್ರದ ವಿತರಣೆಯ ಜವಾಬ್ದಾರಿಯನ್ನು ವಿತರಕ ಜಯಣ್ಣ ವಹಿಸಿಕೊಂಡಿರೋದು ಚಿತ್ರತಂಡಕ್ಕೆ ಸಂತಸ ತಂದಿದೆ.

ಇನ್ನು ರಾಂಧವ ಕನ್ನಡದ ಜತೆಗೆ ತಮಿಳು ಭಾಷೆಯಲ್ಲಿಯೂ ತೆರೆಗೆ ಬರಲಿದ್ದು, ಕರ್ನಾಟಕದಲ್ಲಿ ಬಿಡುಗಡೆಯಾಗುವ ಜತೆಗೆ ವಿದೇಶದಲ್ಲಿಯೂ ಏಕಕಾಲಕ್ಕೆ ಪ್ರದರ್ಶನ ಮಾಡಬೇಕೆಂದು ನಿರ್ಮಾಪಕ ಸನತ್ ಕುಮಾರ್ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಆ ನಿಟ್ಟಿನಲ್ಲಿ ಚಿತ್ರದ ಕೆಲಸಗಳು ಬರದಿಂದ ಸಾಗುತ್ತಿದೆ. ಫ್ಯಾಂಟಸಿ ಮತ್ತು ಫಿಕ್ಷನಲ್ ಮಾದರಿಯ ರಾಂಧವ ಚಿತ್ರಕ್ಕೆ ಸುನೀಲ್ ಆಚಾರ್ಯ ಆ್ಯಕ್ಷನ್ ಕಟ್ ಹೇಳಿದ್ದಾರೆ. ಭುವನ್ ಪೊನ್ನಣ್ಣ ಅವರಿಗೆ ಹೈದರಾಬಾದ್ ಮೂಲಕ ಅಪೂರ್ವ ಶ್ರೀನಿವಾಸ್ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಗಾಯಕ ಶಶಾಂಕ್ ಶೇಷಗಿರಿ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top