ಸ್ಯಾಂಡಲ್ ವುಡ್ ಗೆ ಡೈಲಾಗ್ ಕಿಂಗ್ ಮಗ!

Picture of Cinibuzz

Cinibuzz

Bureau Report

ತಮ್ಮ ವಿಭಿನ್ನ ಮ್ಯಾನರಿಸಂ ಮತ್ತು ಡೈಲಾಗ್ ಡೆಲಿವರಿ ಮೂಲಕವೇ ಕೋಟ್ಯಾಂತರ ಅಭಿಮಾನಿಗಳನ್ನು ಕನ್ನಡವೂ ಸೇರಿದಂತೆ ಬಹುಭಾಷೆಗಳಲ್ಲಿ ಗಳಿಸಿರುವ ನಟ ಸಾಯಿಕುಮಾರ್. ಅವರ ಸಹೋದರ ರವಿಶಂಕರ್ ಕೂಡ ಬಹುಬೇಡಿಕೆ ನಟ. ಸಹೋದರಿಬ್ಬರು ಸ್ಯಾಂಡಲ್ ವುಡ್, ಟಾಲಿವುಡ್, ಕಾಲಿವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಇದೀಗ ಅವರ ಕುಟುಂಬದಿಂದಲೇ ಸಾಯಿಕುಮಾರ್ ರ ಪುತ್ರ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಹೌದು.. ಡೈಲಾಗ್ ಕಿಂಗ್ ಸಾಯಿಕುಮಾರ್ ರ ಪುತ್ರ ಆದಿ ಈಗಾಗಲೇ ತೆಲುಗು ಸಿನಿಮಾಗಳಲ್ಲಿ ನಟಿಸಿ ಸಾಕಷ್ಟು ಹೆಸರು ಗಳಿಸಿದ್ದಾರೆ. ಇತ್ತೀಚಿಗಷ್ಟೇ ಆದಿ ನಾಯಕನಾಗಿ ನಟಿಸಿರುವ ಚುಟ್ಟಾಲಬ್ಬಾಯಿ ಚಿತ್ರ ಟಾಲಿವುಡ್ ನಲ್ಲಿ ಬಿಡುಗಡೆಯಾಗಿ ಉತ್ತಮ ಪ್ರದರ್ಶನವನ್ನು ಕಂಡಿದೆ. ಇದೇ ಚಿತ್ರ ಇದೀಗ ಕನ್ನಡಕ್ಕೆ ಡಬ್ಬಿಂಗ್ ಗೆ ಸಿದ್ಧತೆ ನಡೆಯುತ್ತಿದೆಯಂತೆ. ಈ ಮೂಲಕ ಆದಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿರುವುದು ಅಧಿಕೃತ ಘೋಷಣೆಯಾಗಲಿರುವುದೇ ಬಾಕಿ ಇದೆ.

ಇನ್ನಷ್ಟು ಓದಿರಿ

Scroll to Top