ರಿಯಲ್ ರೌಡಿಗಳ ಸಿನಿಮಾ ಯಾರ್ ಮಗ!

Picture of Cinibuzz

Cinibuzz

Bureau Report

ರೌಡಿಸಂ ಸಿನಿಮಾಗಳಲ್ಲಿ ಹೆಸರಾಂತ ರೌಡಿಗಳನ್ನು, ಡಾನ್ ಗಳನ್ನು ಬಳಸಿಕೊಂಡು ಚಿತ್ರದ ಅಂದ ಹೆಚ್ಚಿಸುವ ಸಂಪ್ರದಾಯವನ್ನು ಉಪೇಂದ್ರ ಹುಟ್ಟುಹಾಕಿದ ಮೇಲಂತೂ ಬಹಳಷ್ಟು ಸಿನಿಮಾಗಳಲ್ಲಿ ಅಂತಹ ರಿಯಲ್ ರೌಡಿಗಳು ಬಂದು ಹೋಗಿದ್ದಾರೆ. ಸದ್ಯ ಪಡುಕೋಟೆ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಯಾರ್ ಮಗ ಚಿತ್ರಕ್ಕೂ ಇಂತಹುದೇ ಸಾಹಸಕ್ಕೆ ಕೈ ಹಾಕಿದೆ.

ಯೆಸ್..  ತಾಯಿ ಮಗನ ಮತ್ತು ಭೂಗತ ಜಗತ್ತಿನ ಎಳೆಯನ್ನಿಟ್ಟುಕೊಂಡು ತಯಾರಾಗುತ್ತಿರುವ ಈ ಚಿತ್ರದಲ್ಲಿ ಶಿವಾಜಿನಗರದ ರಿಯಲ್ ರೌಡಿಗಳೇ ನಟಿಸಿದ್ದಾರೆ ಎಂದು ಚಿತ್ರತಂಡವೇ ಸ್ವತಃ ಹೇಳಿಕೊಂಡಿದೆ. ಇದು ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಯನ್ನು ಸೃಷ್ಟಿಸಿದ್ದು, ಯಾರ್ ಮಗ ಎಂದು ಬಾಯಿ ಬಾಯಿ ಬಿಡುವಂತಾಗಿದೆ.

ಚಿತ್ರದ ಟ್ರೇಲರ್ ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳು ಬರುತ್ತಿವೆ. ಇನ್ನು ಈ ಚಿತ್ರವನ್ನು ಸುರೇಶ್ ರಾಜ್ ನಿರ್ದೇಶನ ಮಾಡಿದ್ದು, ನಿರ್ಮಾಪಕ ಬಸವರಾಜ್ ಪಡುಕೋಟೆಯವರ ಮಗ ರಘು ಪಡುಕೋಟೆ ನಾಯಕನಾಗಿ ನಟಿಸಿದ್ದಾರೆ. ಇವರಿಗೆ ವಿದ್ಯಾಪ್ರಭು ನಾಯಕಿಯಾಗಿ ನಟಿಸಿದ್ದಾರೆ. ಅಶ್ವಿನಿ ಗೌಡ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನಷ್ಟು ಓದಿರಿ

Scroll to Top