ಗೌರಿ ಖಾನ್ ಮೇಲೆ ಟ್ರೋಲಿಗರು ಕೆಂಡಾಮಂಡಲ!

Picture of Cinibuzz

Cinibuzz

Bureau Report

ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುವ ಅಮ್ಮ ಮಗಳ ಪೈಕಿ ಶಾರುಖ್ ಪತ್ನಿ ಗೌರಿ ಮತ್ತು ಸುಹಾನಾ ಪ್ರಮುಖರಾದವರು. ಸದಾ ಒಂದಿಲ್ಲೊಂದು ವಿಚಾರಕ್ಕೆ ಟ್ವಿಟರ್ ನಲ್ಲಿ ಪೋಸ್ಟ್ ಮಾಡುವ ಗೌರಿ ಸದಾ ಇಂಟೀರಿಯರ್ ವಿನ್ಯಾಸದ ಚಿತ್ರಣಗಳು ಹಾಗೂ ತಮ್ಮ ಮಕ್ಕಳ ಚಿತ್ರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.

ಇತ್ತೀಚಿಗೆ ಗೌರಿ ಖಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಇಂಟೀರಿಯರ್ ವಿನ್ಯಾಸಕ್ಕೆ ಸಂಬಂಧಿಸಿದಂತೆ ಅಶ್ಲೀಲ ಚಿತ್ರವೊಂದನ್ನು ಪೋಸ್ಟ್ ಮಾಡುವ ಮೂಲಕ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರು ಶೇರ್ ಮಾಡಿದ ಚಿತ್ರಕ್ಕೆ ಶಾರುಖ್ ಅಭಿಮಾನಿಗಳು ಸಹ ಸಿಟ್ಟಾಗಿದ್ದಾರೆ. ಬಳಿಕ ನೆಟ್ಟಿಗರು ಕೊಟ್ಟ ಖಾರವಾದ ಪ್ರತಿಕ್ರಿಯೆಗೆ ಗೌರಿ, ಆ ಚಿತ್ರವನ್ನು ಡಿಲೀಟ್ ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top