ಡೇಟಿಂಗ್ ನಲ್ಲಿದ್ದಾರೆ ಶಾರುಖ್ ಖಾನ್ ಪುತ್ರ!

Picture of Cinibuzz

Cinibuzz

Bureau Report

ಸಿನಿಮಾ ಇಂಡಸ್ಟ್ರಿಗೆ ಬರುವ ತಯಾರಿಯ ಜತೆ ಜತೆಗೆ ಶಾರುಖ್ ಖಾನ್ ಪುತ್ರ ಬಾಲಿವುಡ್ ನಟಿ ಅನನ್ಯ ಪಾಂಡೆ ಜತೆ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸಾಕಷ್ಟು ಪಾರ್ಟಿಗಳಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡ ಫೋಟೋಗಳು ಕೂಡ ಹೆಚ್ಚು ವೈರಲ್ ಆಗಿದ್ದೇ ಇದಕ್ಕೆ ಮೇನ್ ರೀಜನ್. ಆದರೆ ಇವರಿಬ್ಬರ ರಿಲೇಷನ್ ಶಿಪ್ ಕುರಿತಾಗಿ ಯಾರೊಬ್ಬರು ಸ್ಪಷ್ಟನೆ ನೀಡಿಲ್ಲ.

ಆದರೆ ಇಬ್ಬರು ಬಹುಕಾಲದ ಸ್ನೇಹಿತರು. ಹಾಗಾಗಿ ಒಟ್ಟಿಗೆ ತಿರುಗಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದೀಗ ಆರ್ಯಾ ಬೇರೊಬ್ಬ ಹುಡುಗಿಯ ಜತೆಗೆ ಡೇಟ್ ನಲ್ಲಿರುವುದು ಕೇಳಿಬರುತ್ತಿದ್ದು, ಪಾರ್ಟಿಯೊಂದರಲ್ಲಿ ಹುಡುಗಿ ಜೊತೆ ಡ್ಯಾನ್ಸ್ ಮಾಡುತ್ತಿರುವ ಆರ್ಯನ್ ಈ ಫೋಟೋವನ್ನ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಆಕೆ ಯಾರು, ಏನು ಎಂಬುದರ ಬಗ್ಗೆ ಯಾವುದೇ ಮಾಹಿತಿ ಕೊಟ್ಟಿಲ್ಲ. ಊರಿಗೆ ಬಂದೋರು ನೀರಿಗೆ ಬರಲ್ವೇ…

ಇನ್ನಷ್ಟು ಓದಿರಿ

Scroll to Top