ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳಿಗೆ ಬಂಪರ್ ಆಫರ್!

Picture of Cinibuzz

Cinibuzz

Bureau Report

ಸದ್ಯ ಸ್ಯಾಂಡಲ್ ವುಡ್ ನಲ್ಲಿ ಒಂದೆಡೆ ಪೈಲ್ವಾನ್ ಮತ್ತೊಂದೆಡೆ ಕುರುಕ್ಷೇತ್ರ ಚಿತ್ರದ ಕುರಿತೇ ಸಖತ್ ಟಾಕು. ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿರುವ ಈ ಎರಡು ಚಿತ್ರಗಳು ಚಿತ್ರೀಕರಣ ಮುಗಿಸಿ ರಿಲೀಸ್ ಗೆ ರೆಡಿಯಾಗಿದ್ದರೂ ಸಹ ಬಿಡುಗಡೆ ದಿನಾಂಕವನ್ನು ಹಿಂದಕ್ಕೆ, ಮುಂದಕ್ಕೆ ಹಾಕಿಕೊಂಡೇ ದಿನ ಗಳೆಯುತ್ತಿದೆ. ಸದ್ಯ ಪೈಲ್ವಾನ್ ಮತ್ತು ಕುರುಕ್ಷೇತ್ರ ಚಿತ್ರಗಳು ತಮ್ಮ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದು, ಬದಲಾವಣೆಯ ದಿನಾಂಕವನ್ನು ಸದ್ಯದಲ್ಲಿಯೇ ಅನೌನ್ಸ್ ಮಾಡಲಿದೆ.

ಈ ಮಧ್ಯೆ ಕುರುಕ್ಷೇತ್ರ ಚಿತ್ರತಂಡ ಹೊಸ ಕಾಂಟೆಸ್ಟ್ ಒಂದನ್ನು ಆಯೋಜಿಸಿದೆ. ಅದೇನು ಅಂದರೆ ಈಗಾಗಲೇ ಎರಡು ಟ್ರೇಲರ್ ಗಳನ್ನು ಬಿಡುಗಡೆ ಮಾಡಿಕೊಂಡಿರುವ ಕುರುಕ್ಷೇತ್ರ ಚಿತ್ರದ ಡೈಲಾಗ್ ಗಳನ್ನು ಟಿಕ್ ಟಾಕ್ ಮಾಡಿ ಅಪ್ ಲೋಡ್ ಮಾಡುವುದೇ ಆ ಕಾಂಟೆಸ್ಟು. ಹೌದು.. ಕುರುಕ್ಷೇತ್ರ ಚಿತ್ರಕ್ಕೆ ಸಂಬಂಧಿಸಿ ಟಿಕ್ ಟಾಕ್ ಮಾಡಿ ವಿಡಿಯೋವನ್ನು ಕುರುಕ್ಷೇತ್ರ,  ಡಿಬಾಸ್ ಎಂದು ಹ್ಯಾಶ್ ಟ್ಯಾಗ್ ಹಾಕಿ ಪೋಸ್ಟ್ ಮಾಡಬೇಕು. ಮುಂದಿನ ತಿಂಗಳು ಆಗಸ್ಟ್ 5ರ ಒಳಗೆ ವಿಡಿಯೋವನ್ನು ಪೋಸ್ಟ್ ಮಾಡಬೇಕು. ಆಯ್ಕೆಯಾದ 15 ಜನರ ಪಟ್ಟಿಯನ್ನು ಆಗಸ್ಟ್ 7ಕ್ಕೆ ವಿಜೇತರು ಎಂದು ಅನೌನ್ಸ್ ಸಹ ಮಾಡಲಾಗುತ್ತದೆ. ಗೆದ್ದ ಸ್ಪರ್ಧಿಗಳಿಗೆ ಉಚಿತವಾಗಿ ಕುರುಕ್ಷೇತ್ರದ ಚಿತ್ರದ ಟಿಕೇಟನ್ನು ನೀಡಲಾಗುತ್ತದೆಯಂತೆ.

ಇನ್ನಷ್ಟು ಓದಿರಿ

Scroll to Top