ನಾಳೆ ಅಧ್ಯಕ್ಷ ಇನ್ ಅಮೆರಿಕಾ ಟೀಸರ್ ಬಿಡುಗಡೆ!

Picture of Cinibuzz

Cinibuzz

Bureau Report

Rambo 2 , ವಿಕ್ಟರಿ 2 ಚಿತ್ರದ ನಂತರ ಶತಕದ ಸರದಾರ ಶರಣ್ ಮತ್ತೊಮ್ಮೆ ಸಿಲ್ವರ್ ಸ್ಕ್ರೀನ್ ನಲ್ಲಿ ಅಧ್ಯಕ್ಷ ಇನ್ ಅಮೆರಿಕಾ ಚಿತ್ರದ ಮೂಲಕ ಅಬ್ಬರಿಸಲು ರೆಡಿಯಾಗಿದ್ದಾರೆ. ಇಲ್ಲಿ ಶರಣ್ ಗೆ ರಾಗಿಣಿ ದ್ವಿವೇದಿ ನಾಯಕಿ. ಈಗಾಗಲೇ ಚಿತ್ರದ ಶೂಟಿಂಗ್ ಅಂತಿಮ ಹಂತದಲ್ಲಿದ್ದು, ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ನಾಳೆ ಶ್ರೀ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನೆರವೇರಲಿದೆ. ಅಧ್ಯಕ್ಷ ಇನ್ ಅಮೆರಿಕಾ ಸಿನಿಮಾವನ್ನು ಪೀಪರ್ ಮೀಡಿಯಾ ಫ್ಯಾಕ್ಟರಿ ಮೂಲಕ ಟಿ.ಜಿ. ವಿಶ್ವಪ್ರಸಾದ್ ನಿರ್ಮಾಣ ಮಾಡುತ್ತಿದ್ದು, ಇವರಿಗೆ ವಿವೇಕ್ ಕುಚಿಬೋತ್ಲಾ ಸಾಥ್ ನೀಡಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷನೊಬ್ಬ ಅಮೆರಿಕಾಕ್ಕೆ ಹೋಗಿ ಏನು ಮಾಡುತ್ತಾನೆ ಎಂಬುದನ್ನು ಮೂಲ ಎಳೆಯಾಗಿಟ್ಟುಕೊಂಡು ಅಧ್ಯಕ್ಷ ಇನ್ ಅಮೆರಿಕಾ ಸಿನಿಮಾವನ್ನು ತಯಾರಿಸಲಾಗಿದ್ದು, ಯೋಗಾನಂದ್ ಮುದಾನ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಶರಣ್ ಗ್ರಾಮ ಪಂಚಾಯಿತಿ ಅಧ್ಯಕ್ಷನ ಪಾತ್ರವನ್ನು ನಿರ್ವಹಿಸಿದ್ದರೆ ರಾಗಿಣಿ ಅನಿವಾಸಿ ಭಾರತೀಯ ಪಾತ್ರವನ್ನು ಮಾಡಿದ್ದಾರೆ. ಉಳಿದಂತೆ ದಿಶಾಪಾಂಡೆ, ಅವಿನಾಶ್, ಪ್ರಕಾಶ್ ಬೆಳವಾಡಿ, ಸಾಧುಕೋಕಿಲಾ, ಪದ್ಮಜಾರಾವ್, ಶಿವರಾಜ್ ಕೆ.ಆರ್.ಪೇಟೆ ಮುಂತಾದವರು ತಾರಾಗಣದಲ್ಲಿದ್ಧಾರೆ. ಇನ್ನು ವಿ ಹರಿಕೃಷ್ಣ ಸಂಗೀತ, ಸಿದ್ಧಾರ್ಥ, ಅನೀಶ್ ಹಾಗೂ ಸುಧಾಕರ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

 

 

 

ಇನ್ನಷ್ಟು ಓದಿರಿ

Scroll to Top