ಮಳೆಯಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟ ಜಾಹ್ನವಿ ಕಪೂರ್!

Picture of Cinibuzz

Cinibuzz

Bureau Report

ಶ್ರೀದೇವಿ ಮರಣದ ನಂತರ ಫಾರ್ಮ್ ಗೆ ಬಂದ ಮಗಳು ಜಾಹ್ನವಿ ಕಪೂರ್ ಬಾಲಿವುಡ್ ನಲ್ಲಿ ಸದ್ಯ ಚಾರ್ಮ್ ಸೃಷ್ಟಿಸುತ್ತಿರುವ ನಟಿಯಲ್ಲೊಬ್ಬರು. ತಮ್ಮ ಧಡಕ್ ಚಿತ್ರದ ಮೂಲಕ ತನ್ನದೇ ಅಭಿಮಾನಿ ಬಳಗವನ್ನು ಹೊಂದಿರುವ ಜಾಹ್ನವಿ ಕಪೂರ್ ಎಲ್ಲರಿಗೂ ಗೊತ್ತಿರುವಂತೆ ಫಿಟ್ ನೆಸ್ ಪ್ರಿಯೆ. ಶೂಟಿಂಗ್ ಇಲ್ಲದಿದ್ರೆ ಜಾಹ್ನವಿ ಜಿಮ್ ಗೆ ತೆರಳಿ ಬೆವರಿಳಿಸುತ್ತಾರೆ. ತಾಯಿಯಂತೆ ಸೌಂದರ್ಯದ ಮೇಲೆ ಹೆಚ್ಚು ಕಾಳಜಿಯನ್ನು ಹೊಂದಿದ್ದಾರೆ.

ಇತ್ತೀಚಿಗೆ ಜಾಹ್ನವಿ ಕಪೂರ್ ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದರೂ ಬಿಡುವು ಮಾಡಿಕೊಂಡು ಜಿಮ್​ಗೆ ತೆರಳಿದ್ದರು. ಈ ವೇಳೆ ಛಾಯಾಗ್ರಾಹಕ ಯೋಗನ್​ ಶಾರ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಬ್ಲಾಕ್​ ಶಾರ್ಟ್ಸ್​ ಹಾಗೂ ನಿಯಾನ್​ ಗ್ರೀನ್​ ಟಾಪ್​ನಲ್ಲಿ ಕ್ಯಾಮೆರಾಗೆ ಫೋಸ್​​ ಕೊಟ್ಟು ಹಾಯ್​ ಮಾಡಿದ್ದಾರೆ. ಜಾಹ್ನವಿ ಅವರ ಈ ಫೋಟೋ ಎಲ್ಲೆಡೆ ಹರಿದಾಡುತ್ತಿದೆ. ಸದ್ಯ ಜಾಹ್ನವಿ ಕಪೂರ್​ ರಾಜ್‌ಕುಮಾರ್ ರಾವ್ ಹಾಗೂ ವರುಣ್ ಶರ್ಮಾ ನಟನೆಯ ‘ರೂಹ್ ಅಫ್ಜಾ’ ಹಾಗೂ ಕರಣ್​ ಜೋಹಾರ್​ ನಿರ್ಮಾಣದ ‘ತಖ್ತ್’ ಚಿತ್ರದ ತಯಾರಿಯಲ್ಲಿದ್ದಾರೆ

ಇನ್ನಷ್ಟು ಓದಿರಿ

Scroll to Top