ತಂದೆಯಾಗುತ್ತಿದ್ದಾರೆ ಕಪಿಲ್ ಶರ್ಮಾ!

Picture of Cinibuzz

Cinibuzz

Bureau Report

ಕಾಮಿಡಿ ಕಿಂಗ್​ ಕಪಿಲ್ ಶರ್ಮಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನ ಒಂದರಲ್ಲಿ ಕಪಿಲ್​ ದೃಢಪಡಿಸಿದ್ದಾರೆ. ತಮ್ಮ ಪತ್ನಿ ಗಿನ್ನಿ ಚತ್ರತ್, ತಮ್ಮ ಬೇಬಿಮೂನ್ ಗೆ ಸಜ್ಜಾಗಿದ್ದಾರೆ ಅಂತಾ ಕಪಿಲ್​ ತಿಳಿಸಿದ್ದಾರೆ.

ತಮ್ಮ ಕುಟುಂಬಕ್ಕೆ ಬರುತ್ತಿರುವ ಹೊಸ ಕುಡಿಯೊಂದನ್ನು ಸ್ವಾಗತಿಸಲು ತುಂಬಾ ಉತ್ಸುಕರಾಗಿದ್ದೇವೆ ಎಂತಲೂ ತಿಳಿಸಿದ್ದಾರೆ. ತಂದೆ ಖುಷಿಯಲ್ಲಿರುವ ಅವರು, ‘ಇದು ನಮ್ಮ ಮೊದಲ ಮಗು. ನಾನು ಈಗ ನನ್ನ ಹೆಂಡತಿಯನ್ನು ನೋಡಿಕೊಳ್ಳಲು ಹಾಗೂ ಅವಳ ಪಕ್ಕದಲ್ಲಿರಲು ಬಯಸುತ್ತೇನೆ’ ಎಂದೂ ಹೇಳಿದ್ದಾರೆ.

ಇನ್ನಷ್ಟು ಓದಿರಿ

Scroll to Top