ಸಾಮಾನ್ಯವಾಗಿ ಬಹುಭಾಷೆಗಳಲ್ಲಿ ನಟಿಸುವಂತಹ ನಟ ನಟಿಯರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿಮಾನಿಗಳಿರುತ್ತಾರೆ. ಅವರೂ ಯಾವ ದೇಶಕ್ಕೆ ಹೋದರೂ ಆಟೋಗ್ರಾಫ್ ಪ್ಲೀಸ್ ಎಂದು ಕೈಯೊಡ್ಡುವವರ ಸಂಖ್ಯೆಯೂ ಕಮ್ಮಿ ಇರುವುದಿಲ್ಲ. ಆ ನಿಟ್ಟಿನಲ್ಲಿ ಸೋನು ಸೂದ್ ರವರು ಸಹ ಅಂತಹುದೇ ಫ್ಯಾನ್ಸ್ ಫಾಲೋವರ್ಸ್ ಗಳನ್ನು ಹೊಂದಿದ್ದು, ಭಾರತವೂ ಸೇರಿದಂತೆ ನೆರೆಯ ರಾಷ್ಟ್ರಗಳಲ್ಲಿಯೂ ಅಭಿಮಾನಿಗಳನ್ನು ಹೊಂದಿದ್ದಾರೆ.

ಇನ್ನು ಅಭಿಮಾನಿಗಳ ಆಸೆ ಆಕಾಂಕ್ಷೆಗಳನ್ನು ಶಿರಸಾವಹಿಸಿ ಪಾಲಿಸುವ ಸೋನು ಸೂದ್ ತನ್ನ ಶ್ರೀಲಂಕಾದ ಅಭಿಮಾನಿಯ ಮದುವೆಗೆ ಹೋಗಿಬಂದಿದ್ದಾರಂತೆ. ಹೌದು.. ತಮ್ಮ ಮಹಿಳಾ ಅಭಿಮಾನಿ ಮದಾರಾ ಹೇಮಚಂದ್ರ ಎಂಬುವವರು ಇತ್ತೀಚಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಫ್ಯಾನ್ ವೆಡ್ಡಿಂಗ್ ಗೆ ಸೋನು ಸರ್ ಪ್ರೈಸ್ ವಿಸಿಟ್ ಕೊಟ್ಟು ನೆರೆದಿದ್ದವರಿಗೆ ಆಶ್ಚರ್ಯವನ್ನುಂಟು ಮಾಡಿದ್ದಾರೆ. ಅಲ್ಲದೇ ನವದಂಪತಿಗಳ ಜತೆಗೆ ಫೋಟೋಗೂ ಫೋಸ್ ಕೊಟ್ಟಿದ್ದಾರೆ. ಇದೀಗ ಆ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸೋನು ಸೂದ್ ಅವರಿಗಿರುವ ಕಾಳಜಿಗೆ ಎಲ್ಲರೂ ಶಬ್ಬಾಸ್ ಗಿರಿ ಮಾಡುತ್ತಿದ್ದಾರೆ. ಅಮ್ಮಾ ಬೊಮ್ಮಾಲಿ ಎನ್ನುತ್ತಲೇ ಸೌತ್ ಇಂಡಿಯಾದಲ್ಲಿ ಸೌಂಡು ಮಾಡಿದ ಬಾಲಿವುಡ್ ನಟ ಸೋನು ಸೂದ್. ಈ ಚಿತ್ರದ ಯಶಸ್ಸಿನ ನಂತರ ಬಹುಭಾಷೆಗಳಲ್ಲಿಯೂ ಅವಕಾಶ ಗಿಟ್ಟಿಸಿಕೊಂಡ ಸೋನು ಸೂದ್ ಸದ್ಯ ಕನ್ನಡದ ಕುರುಕ್ಷೇತ್ರದಲ್ಲಿ ಅರ್ಜುನನ ಪಾತ್ರವನ್ನು ಮಾಡಿದ್ದಾರೆ.











































