ಸದ್ಯ ಮಿಷನ್ ಮಂಡಲ್ ಚಿತ್ರದ ಸಕ್ಸಸ್ ನಲ್ಲಿ ತೇಲುತ್ತಿರುವ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರ ಮುಂದಿನ ಚಿತ್ರವೂ ಅನೌನ್ಸ್ ಆಗಿದೆ. ಹೌದು.. ಅಕ್ಷಯ್ ಕುಮಾರ್ ಬಚ್ಚನ್ ಪಾಂಡೆ ಎಂಬ ಚಿತ್ರದಲ್ಲಿ ನಟಿಸಲಿದ್ದು, ಇದರ ಪೋಸ್ಟರ್ ಇಂದು ಬಿಡುಗಡೆಯಾಗಿದೆ.
https://twitter.com/akshaykumar/status/1154624812460810242
ಪೋಸ್ಟರ್ ನಲ್ಲಿ ಕಪ್ಪು ಬಣ್ಣದ ಲುಂಗಿಯುಟ್ಟು, ಹಣೆಯಲ್ಲಿ ವಿಭೂತಿ ಧರಿಸಿ ರಗಡ್ ಲುಕ್ನೊಂದಿಗೆ ಅಕ್ಷಯ್ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಬಚ್ಚನ್ ಪಾಂಡೆ ಚಿತ್ರವನ್ನು ಸಾಜಿದ್ ನಾಡಿಯದ್ವಾಲಾ ನಿರ್ದೆಶನ ಮಾಡುತ್ತಿದ್ದು, 2020ರ ಕ್ರಿಸ್ ಮಸ್ ಗೆ ಬಿಡುಗಡೆ ಮಾಡುವ ಪ್ಲ್ಯಾನ್ ನಲ್ಲಿ ಚಿತ್ರತಂಡವಿದೆ.











































