ಜನಧನ್ ಗೆ ಸೆನ್ಸಾರ್ ಯು/ಎ ಪ್ರಮಾಣಪತ್ರ!

Picture of Cinibuzz

Cinibuzz

Bureau Report

ನರೇಂದ್ರ ಮೋದಿಯವರು ಪ್ರಧಾನಿಯಾದ ಬೆನ್ನಲ್ಲೆ ಜಾರಿಗೆ ತಂದಂತಹ ಸಾಕಷ್ಟು ಯೋಜನೆಗಳ ಪೈಕಿ ಜನ್ ಧನ್ ಕೂಡ ಪ್ರಮುಖವಾದದ್ದು. ಈಗ ಅದೇ ಎಳೆಯನ್ನೇ ಮೂಲವಾಗಿಟ್ಟುಕೊಂಡು ಸ್ಯಾಂಡಲ್ ವುಡ್ ನಲ್ಲಿ ಜನ್ ಧನ್ ಎನ್ನುವ ಸಿನಿಮಾ ರೆಡಿಯಾಗಿದ್ದು, ಸದ್ಯದಲ್ಲೇ ಬಿಡುಗಡೆಯೂ ಆಗಲಿದೆ. ನರೇಂದ್ರ ಮೋದಿಯವರು ಜನ್ ಧನ್ ಯೋಜನೆ ಜಾರಿಗೆ ತಂದಾಗ, ನೋಟು ಅಮಾನ್ಯ ಮಾಡಿದಾಗ ಆದಂತಹ ಘಟನಾವಳಿಗಳಿಗೆ ಮನರಂಜನೆಯ ರೂಪುಕೊಟ್ಟು ಕಾಮಿಡಿ ಮಾದರಿಯಲ್ಲಿ ಜನ್ ಧನ್ ಸಿನಿಮಾವನ್ನು ತಯಾರಿಸಲಾಗಿದ್ದು, ಟಿ ನಾಗಚಂದ್ರ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇನ್ನು ಶ್ರೀ ಸಿದ್ಧಿ ವಿನಾಯಕ ಫಿಲಂಸ್ ಲಾಂಛನದಲ್ಲಿ ನಾಗಚಂದ್ರ ಅವರೇ ನಿರ್ಮಾಣವನ್ನೂ ಮಾಡಿದ್ದಾರೆ.

ಮುಂದಿನ ತಿಂಗಳು ಜನ್ ಧನ್ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ಸೆನ್ಸಾರ್ ಮಂಡಳಿಗೆ ಸಿನಿಮಾದ ಪ್ರಥಮ ಪ್ರತಿಯನ್ನು ಕಳುಹಿಸಲಾಗಿತ್ತು. ಇನ್ನು ಚಿತ್ರಕ್ಕೆ ಯು/ಎ ಪ್ರಮಾಣ ಪತ್ರವನ್ನು ಸೆನ್ಸಾರ್ ಮಂಡಳಿ ನೀಡಿದೆ. ಚಿತ್ರದ ತಾರಾಗಣದಲ್ಲಿ ಸುನೀಲ್ ಶಶಿ, ರಚನಾ, ಮಾ. ಲಕ್ಷ್ಮಣ್, ಅರುಣ್, ಟಾಪ್ ಸ್ಟಾರ್ ರೇಣು, ಜಯಲಕ್ಷ್ಮಿ ಸುನೀಲ್ ವಿನಾಯಕ, ಸುಮನ್, ತೇಜೇಶ್ವರ್ ಮುಂತಾದವರಿದ್ದಾರೆ.

ಇನ್ನಷ್ಟು ಓದಿರಿ

Scroll to Top