ಫಾಸ್ಟ್ ಅಂಡ್ ಫ್ಯೂರಿಯಸ್ 9 ಚಿತ್ರೀಕರಣದಲ್ಲಿ ಅವಘಡ!

Picture of Cinibuzz

Cinibuzz

Bureau Report

ರಾಕ್​ ಮತ್ತು ವಿನ್​ ಡೀಸೆಲ್​ ಅಭಿನಯದ Fast and Furious 9 ಟ್ರೇಲರ್​ ಎಲ್ಲರ ಮನಗೆದ್ದಿದ್ದು, ಅಭಿಮಾನಿಗಳು ಈ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಆದರೆ ಸ್ಟಂಟ್ ಮ್ಯಾನ್ ಚಿತ್ರೀಕರಣದ ವೇಳೆ ಸ್ಟಂಟ್​ ಮಾಡಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡಿರುವ ಘಟನೆ ಇತ್ತೀಚಿಗೆ ನಡೆದಿದೆ.

ದಕ್ಷಿಣ ಇಂಗ್ಲೆಂಡ್ ನ ಲೀವ್ಸ್ ಡೆನ್ ನಲ್ಲಿರುವ ವಾರ್ನರ್ ಬ್ರದರ್ಸ್ ಸ್ಟುಡಿಯೋದಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ವಿನ್ ಡೀಸೆಲ್ ಅವರ ಡೂಪ್ ಜೋ ವಾಟ್ಸ್ ಪಾಲ್ಗೊಂಡಿದ್ದರು. ಫೈಟಿಂಗ್​ ಶೂಟಿಂಗ್​ ವೇಳೆ ಜೋ ವಾಟ್ಸ್​ ಸ್ಟಂಟ್​ ಮಾಡಲು ಹೋಗಿ 30 ಅಡಿಗಳ ಎತ್ತರದಿಂದ ಕೆಳಗೆ ಬಿದ್ದಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಜೋ ವಾಟ್ಸ್ ಅವರ​ನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದರಿಂದ ಅವರು ಕೋಮಾಗೆ ತೆರಳಿದ್ದಾರೆ ಎಂದು ವೈದ್ಯರು ದೃಢೀಕರಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top