ಮದುವೆ ಮತ್ತು ನಿವೃತ್ತಿ ಬಗ್ಗೆ ಮನಬಿಚ್ಚಿ ಮಾತನಾಡಿದ ಕಿಸ್ಸಿಂಗ್ ಸ್ಟಾರ್!

Picture of Cinibuzz

Cinibuzz

Bureau Report

ತೆಲುಗಿನ ಇಮ್ರಾನ್ ಹಶ್ಮಿ ಎಂದೇ ಫೇಮಸ್ ಆಗಿರುವ ವಿಜಯ್ ದೇವರಕೊಂಡ ಅವರು ಸಿನಿಮಾ ರಂಗದಿಂದ ನಿವೃತ್ತಿ ಪಡೆಯಲಿದ್ದಾರಂತೆ. ಈ ಕುರಿತು ಸ್ವತಃ ವಿಜಯ್ ದೇವರಕೊಂಡ ಅವರೇ ಖಾಸಗಿ ವಾಹಿನಿಯೊಂದರಲ್ಲಿ ‘ನಿವೃತ್ತಿ ಜೀವನ’ದ ಬಗ್ಗೆ ಕೇಳಿದ ಪ್ರಶ್ನೆಗೆ “ಸಿನಿಮಾ ಹೊರತುಪಡಿಸಿ ಜೀವನಕ್ಕೆ ಬೇರೆ ಏನಾದರೂ ಮಾಡಬಹುದು ಎಂದು ನನಗೆ ತಿಳಿದಾಕ್ಷಣ ನಾನು ಸಿನಿಮಾದಿಂದ ನಿವೃತ್ತಿ ತೆಗೆದುಕೊಳ್ಳುವೆ” ಎಂದು ವಿಜಯ್ ಹೇಳಿದ್ದಾರೆ.

ಇನ್ನು 35 ವರ್ಷಕ್ಕೆ ಮದುವೆಯಾಗುವುದಾಗಿಯೂ ಅಂದರೆ ಇನ್ನು 5 ವರ್ಷದೊಳಗೆ ಮದುವೆ ಆಗುವ ಪ್ಲ್ಯಾನ್ ನಲ್ಲಿದ್ದೇನೆ ಎಂದು ಮದುವೆ ಕುರಿತಾದ ಪ್ರಶ್ನೆಗೂ ಉತ್ತರಿಸಿದ್ದಾರೆ.

ಇನ್ನಷ್ಟು ಓದಿರಿ

Scroll to Top