ಸಿನಿ ತಾರೆಯರ ಡೇಟಿಂಗು, ಬ್ರೇಕಪ್ಪು, ಲವ್ವು, ಡವ್ವುಗಳಿಗೇನೂ ಕಮ್ಮಿ. ನಿನ್ನೆ ಮೊನ್ನೆ ಜತೆಯಾಗಿ ಓಡಾಡಿದರೂ, ಅವಾರ್ಡ್ ಫಂಕ್ಷನ್ ಗಳಲ್ಲಿ ಕಾಣಿಸಿಕೊಂಡವರೂ ಮೂರನೇ ದಿನ ಮದುವೆಯ ಸುದ್ದಿಯನ್ನು ಹರಿಬಿಡುತ್ತಾರೆ. ಇನ್ನೂ ಆದರ್ಶ ದಂಪತಿಗಳಂತೆ ಫೋಸು ಕೊಟ್ಟವರು ಅದ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸಂಬಂಧ ಕಡಿದುಕೊಂಡೂ ಬಿಡುತ್ತಾರೆ. ಇವೆಲ್ಲವೂ ಸೆಲೆಬ್ರೆಟಿಗಳ ಪರ್ಸನಲ್ ಜೀವನದಲ್ಲಿ ಕಾಮನ್ನು.
View this post on InstagramAt, by and on your side. @shibanidandekar ❤️ #poolheads #kohsamui #FarOutdoors
A post shared by Farhan Akhtar (@faroutakhtar) on
ಸದ್ಯ ಇಂತಹುದೇ ಚರ್ಚೆಯಲ್ಲಿ ಬಾಲಿವುಡ್ ನಟ ಫರ್ಹಾನ್ ಅಖ್ತರ್ ಇದ್ದಾರೆ. ಹೌದು.. ಫರ್ಹಾನ್ ಟಿವಿ ಆ್ಯಕ್ಷರ್ ಹಾಗೂ ಸಿಂಗರ್ ಶಿಬಾನಿ ಜತೆಗೆ ಡೇಟ್ ಮಾಡುತ್ತಿರುವುದು ಬಿ ಟೌನಿನ ಗಲ್ಲಿಗಳಲ್ಲಿ ಕೇಳುಬರುತ್ತಿದ್ದ ವಿಚಾರವೇ. ಆದರೆ ಆ ಸಂಗತಿಗೆ ಅಷ್ಟೇನೂ ಪ್ರಾಮುಖ್ಯತೆ ಕೊಡದ ಈ ಜೋಡಿ ತಮ್ಮ ತಮ್ಮ ಬ್ಯುಸಿ ಲೈಫ್ ಲೀಡ್ ಮಾಡುತ್ತಿದ್ದರು. ಆದರೆ ಫರ್ಹಾನ್ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಫೋಟೋವೊಂದನ್ನು ಸದ್ಯ ಅಪ್ ಲೋಡ್ ಮಾಡಿರೋದು ಎಲ್ಲರ ಅನುಮಾನಗಳಿಗೆ ಬಲ ತಂದಿದೆ. ಹೌದು.. ಫೋಟೋದಲ್ಲಿ ಫರ್ಹಾನ್ ಅಖ್ತರ್ ಹಾಗೂ ಶಿಬಾನಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಒಟ್ಟಿಗೆ ಕೂತು ಕ್ಯಾಮೆರಾಗೆ ಫೋಸ್ ಕೊಟ್ಟಿದ್ದಾರೆ. ಇನ್ನು ಈ ಫೊಟೋವನ್ನು ಥೈಲ್ಯಾಂಡ್ ನಲ್ಲಿ ತೆಗೆದಿರಬಹುದು ಎಂದು ಹೇಳಲಾಗುತ್ತಿದೆ. ಇನ್ನು ಫೊಟೋ ಅಪ್ ಲೋಡ್ ಮಾಡಿರೋ ಫರ್ಹಾನ್, ನಾನು ನಿನ್ನ ಜೊತೆ ಇದೀನಿ ಅಂತಾ ಕ್ಯಾಪ್ಷನ್ ಕೊಟ್ಟಿದ್ದಾರೆ.











































