ಬೋನಿಕಪೂರ್ ಚಿತ್ರದಲ್ಲಿ ಅಜಿತ್ ಕುಮಾರ್!

Picture of Cinibuzz

Cinibuzz

Bureau Report

 

ಬಾಲಿವುಡ್ ಖ್ಯಾತ ನಿರ್ಮಾಪಕ ಬೋನಿಕಪೂರ್ ತಮಿಳಿನ ಸ್ಟಾರ್ ನಟ ತಲಾ ಅಜಿತ್ ಕುಮಾರ್ ಅವರ 60ನೇ ಸಿನಿಮಾವನ್ನು ನಿರ್ಮಾಣ ಮಾಡುವುದಾಗಿ ಅನೌನ್ಸ್ ಮಾಡಿದ್ದಾರೆ. ಸದ್ಯ ನೆರ್ಕೊಂಡ ಪಾರ್ವತಿಯನ್ನು ನಿರ್ಮಾಣ ಮಾಡುತ್ತಿರುವ ಬೋನಿಕಪೂರ್ ತಮ್ಮ ಮುಂದಿನ ಚಿತ್ರವನ್ನು ಕೂಡ ಘೋಷಿಸಿದ್ದಾರೆ.

ಎಚ್. ವಿನೋದ್ ನಿರ್ದೆಶನ ಮಾಡುತ್ತಿರುವ ನೆರ್ಕೊಂಡ ಪಾರ್ವತಿ ಹಿಂದಿಯ ಪಿಂಚ್ ಚಿತ್ರದ ರಿಮೇಕ್ ಆಗಿದೆ. ಅಜಿತ್ ಅವರು 60ನೇ ಚಿತ್ರವನ್ನು ಎಚ್. ವಿನೋದ್ ಅವರ ನಿರ್ದೆಶನ ಮಾಡಲಿದ್ದು, ಅವರೇ ಅಜಿತ್ ಗಾಗಿ ಕಥೆಯೊಂದನ್ನು ಬರೆದಿದ್ದಾರಂತೆ. ಆಗಸ್ಟ್ ಕೊನೆಯ ವಾರದಲ್ಲಿ ಚಿತ್ರದ ಮುಹೂರ್ತ ಕಾರ್ಯಕ್ರಮ ನಡೆಯಲಿದ್ದು, ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ಟ್ವಿಟರ್ ನಲ್ಲಿ ಸ್ವತಃ ಬೋನಿಕಪೂರ್ ಅವರೇ ಬರೆದುಕೊಂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top