ತ್ರಿವಿಕ್ರಮ ಚಿತ್ರಕ್ಕೆ ಪಂಚತಂತ್ರ ಅಕ್ಷರಾ ಗೌಡ ಎಂಟ್ರಿ!

Picture of Cinibuzz

Cinibuzz

Bureau Report

 

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ನಟಿಸುತ್ತಿರುವ ಚೊಚ್ಚಲ ಸಿನಿಮಾ ತ್ರಿವಿಕ್ರಮ. ಈಗಾಗಲೇ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಬರದಿಂದ ಸಾಗುತ್ತಿದ್ದು, ಜತೆಗೆ ಪಾತ್ರವರ್ಗಗಳ ಆಯ್ಕೆಯೂ ಅಷ್ಟೇ ವೇಗದಲ್ಲಿ ನಡೆಯುತ್ತಿದೆ. ಚಿತ್ರಕ್ಕೆ ತ್ರಿವಿಕ್ರಮ ಎಂದು ಟೈಟಲ್ ಫಿಕ್ಸ್ ಮಾಡಲಾಗಿದ್ದು, ಇಬ್ಬರು ನಾಯಕಿಯರು ವಿಕ್ರಮ್ ಗೆ ಜತೆಯಾಗಲಿದ್ದಾರೆ. ಈ ಮೊದಲು ಮುಂಬೈ ಮೂಲಕ ಆಕಾಂಕ್ಷ ಶರ್ಮಾ ಅವರನ್ನು ನಾಯಕಿಯಾಗಿ ಆರಿಸಿಕೊಂಡಿರುವ ಚಿತ್ರತಂಡ ಸದ್ಯ ಪಂಚತಂತ್ರದ ಹುಡುಗಿ ಅಕ್ಷರಾ ಗೌಡ ಅವರನ್ನು ಮತ್ತೊಬ್ಬ ನಾಯಕಿಯಾಗಿ ಆಯ್ಕೆ ಮಾಡಿದೆ.

ಚಿತ್ರದಲ್ಲಿ ಅಕ್ಷರಾ ಗೌಡ ಮಾಡರ್ನ್ ಜಗತ್ತಿನ ಪಡ್ಡೆ ಹುಡುಗಿಯರ ಪ್ರತಿನಿಧಿಯಾಗಿ ಕಾಣಿಸಿಕೊಳ್ಳಲಿದ್ದು, ಮಧ್ಯಮ ವರ್ಗದ ಹೆಣ್ಣುಮಗಳಾಗಿ ಮಿಂಚಲಿದ್ದಾರೆ. ತ್ರಿವಿಕ್ರಮ ರೊಮ್ಯಾಂಟಿಕ್ ಲವ್ ಸ್ಟೋರಿಯಾಗಿದ್ದು, ಚಿತ್ರಕ್ಕೆ ಹೈ ವೋಲ್ಟೇಜ್ ಲವ್ ಸ್ಟೋರಿ ಎಂಬ ಅಡಿಬರಹವೂ ಇದೆ. ಆಗಸ್ಟ್ 10ರಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು, ಚಿತ್ರೀಕರಣವನ್ನು ಬೆಂಗಲೂರು, ರಾಜಸ್ಥಾನ, ದಾಂಡೇಲಿ, ಸಿಂಗಪೂರ್ ನಲ್ಲಿ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಇನ್ನಷ್ಟು ಓದಿರಿ

Scroll to Top