ಬೆನ್ನುನೋವಿನಿಂದ ಬಳಲುತ್ತಿದ್ದಾರೆ ಪೈಲ್ವಾನ್!

Picture of Cinibuzz

Cinibuzz

Bureau Report

ಸ್ಯಾಂಡಲ್ ವುಡ್ ನ ಮಿಸ್ಟರ್ ಪರ್ಫೆಕ್ಟ್ ಪೈಲ್ವಾನ್ ಕಿಚ್ಚ ಸುದೀಪ್ ಕನ್ನಡವೂ ಸೇರಿದಂತೆ ಬಹುಭಾಷೆಗಳಲ್ಲಿಯೂ ಬೇಡಿಕೆಯಲ್ಲಿರುವ ನಟ. ಕಳೆದ ಸಾಕಷ್ಟು ದಿನಗಳಿಂದಲೂ ಪೈಲ್ವಾನ್, ಕೋಟಿಗೊಬ್ಬ-3, ದಬಾಂಗ್ 3, ಸೈರಾ ನರಸಿಂಹರೆಡ್ಡಿ ಸಿನಿಮಾಗಳಲ್ಲಿ ಬಿಡುವಿಲ್ಲದೇ ತೊಡಗಿಕೊಂಡಿರುವ ಅವರು ವಿಶ್ರಾಂತಿ ಇಲ್ಲದೇ ಬೆನ್ನುನೋವಿನಿಂದ ಬಳಲುತ್ತಿದ್ದಾರೆ.

ಸದ್ಯ ಕೋಟಿಗೊಬ್ಬ 3 ಚಿತ್ರದ ಚಿತ್ರೀಕರಣಕ್ಕಾಗಿ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸುದೀಪ್ ಬೀಡುಬಿಟ್ಟಿದ್ದಾರೆ. ಚಿತ್ರೀಕರಣದ ಸಮಯದಲ್ಲಿಯೇ ಸುದೀಪ್ ಗೆ ಬೆನ್ನು ನೋವು ಕಾಣಿಸಿಕೊಂಡಿದ್ದು, ವೈದ್ಯರು ತಾತ್ಕಾಲಿಕ ಚಿಕಿತ್ಸೆಯನ್ನು ನೀಡಿದ್ದಾರೆ. ಅಲ್ಲದೇ ಕೆಲದಿನಗಳು ವಿಶ್ರಾಂತಿ ಪಡೆಯುವುದಕ್ಕೂ ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ. ವೈದ್ಯರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿರುವ ಸುದೀಪ್ ವಿಶ್ರಾಂತಿಯ ಮೊರೆಹೋಗಿದ್ದಾರಂತೆ. ದಬಾಂಗ್ 3 ಚಿತ್ರೀಕರಣ ಬಾಕಿ ಇದ್ದು  ಪೈಲ್ವಾನ್ ರಿಲೀಸ್ ಗೆ ರೆಡಿಯಾಗಿದೆ. ಸೈರಾನರಸಿಂಹ ರೆಡ್ಡಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದನ್ನು ಹೊರತುಪಡಿಸಿ ಸುದೀಪ್ ಅನೂಪ್ ಭಂಡಾರಿಯವರ ಜತೆಗೂ ಎರಡು ಸಿನಿಮಾಗಳನ್ನು ಮಾಡಲಿದ್ದು, ಅದರ ತಯಾರಿಯೂ ಸದ್ದಿಲ್ಲದೇ ನಡೆಯುತ್ತಿದೆ.

ಇನ್ನಷ್ಟು ಓದಿರಿ

Scroll to Top