ಬ್ರೈಡಲ್ ಫೋಟೋ ಶೂಟ್ ನಲ್ಲಿ ರಾಖಿ ಸಾವಂತ್!

Picture of Cinibuzz

Cinibuzz

Bureau Report

ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಾಗುವ ಕಾಂಟ್ರೋವರ್ಸಿ ಕ್ವೀನ್ ರಾಖಿ ಸಾವಂತ್. ಇತ್ತೀಚಿಗೆ ಅವರ ಬ್ರೈಡ್ ಗೆಟಪ್ ನ್ನು ನೋಡಿದ್ದ ಮಂದಿ ಅವರು ಕದ್ದು ಮದುವೆಯಾಗಿದ್ದಾರೆಂದು ಗೆಸ್ ಮಾಡಿದ್ದರು. ಹೌದು.. ಮುಂಬೈನ ಜೆ ಡಬ್ಲ್ಯೂ ಮ್ಯಾರಿಯಾಟ್ ಹೋಟಲ್ ನಲ್ಲಿ ಬ್ರೈಡ್ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದೆ ಇದಕ್ಕೆ ಮುಖ್ಯ ಕಾರಣವೂ ಆಗಿತ್ತು.

ಸೋಶಿಯಲ್ ಮೀಡಿಯಾದಲ್ಲಿ ರಾಖಿ ಸಾವಂತ್ ತಮ್ಮ ಮದುವೆ ವಿಚಾರವನ್ನು ಗುಟ್ಟಾಗಿ ಇಡಬೇಕೆಂದು ಬಯಸಿದ್ದು, ಇಡೀ ಹಾಲ್ ಬುಕ್ ಮಾಡದೇ ಹೋಟೆಲ್​ನ​ ರೂಮ್ ಒಂದರಲ್ಲಿ ಕೇವಲ ಕುಟುಂಬಸ್ಥರು ಹಾಗೂ 4-5 ಅತಿಥಿಗಳ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ ಎಂದು ಸುದ್ದಿಗಳೂ ಹರಿದಾಡಿದ್ದವು. ಆದರೆ ಹಾಗೆಲ್ಲ ಏನೂ ಇಲ್ಲ ಎಂದು ಸ್ವತಃ ರಾಖಿ ಸಾವಂತ್ ಅವರೇ ಸ್ಪಷ್ಟಪಡಿಸಿದ್ದು, ಹೋಟೆಲ್ ನಲ್ಲಿ ಬ್ರೈಡಲ್ ಫೋಟೋ ಶೂಟ್ ಮಾಡಿಸುತ್ತಿದ್ದೆ. ಮದುವೆಯಾಗಿದ್ದೀನಿ ಎಂದು ಜನ ಯಾಕೆ ಹೇಳ್ತಿದ್ದಾರೋ ಗೊತ್ತಿಲ್ಲ. ನಾನು ಮದುವೆಯಾಗಿಲ್ಲ. ರಿಲೇಷನ್ ಶಿಪ್ ನಲ್ಲೂ ಇಲ್ಲ. ನಾನು ಸಿಂಗಲ್ ಎಂದು ಸ್ಪಷ್ಟೀಕರಣವನ್ನು ನೀಡಿದ್ದಾರೆ.

ಇನ್ನಷ್ಟು ಓದಿರಿ

Scroll to Top