ಡಿಯರ್ ಕಾಮ್ರೇಡ್ ನೋಡಿ ಮಗಳಿಗೆ ಭೇಷ್ ಅಂದ ಕಿರಿಕ್ ಮದರ್!

Picture of Cinibuzz

Cinibuzz

Bureau Report

ಗೀತಗೋವಿಂದಂ ಚಿತ್ರದ ಮೂಲಕ ಮೋಡಿ ಮಾಡಿದ್ದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಜೋಡಿ ಡಿಯರ್ ಕಾಮ್ರೇಡ್ ಮೂಲಕ ಮತ್ತೆ ಒಂದಾಗಿದ್ದಾರೆ. ಈ ಚಿತ್ರ ಈಗಾಗಲೇ ಬಿಡುಗಡೆಯಾಗಿದ್ದು, ತೆಲುಗು ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ. ಈ ಮಧ್ಯೆ ರಶ್ಮಿಕಾ ಅವರ ತಾಯಿ ಡಿಯರ್ ಕಾಮ್ರೇಡ್ ಸಿನಿಮಾ ನೋಡಿ ಮಗಳ ನಟನೆಗೆ ಭೇಷ್ ಎಂದಿದ್ದಾರೆ. ಅಲ್ಲದೇ ತಮ್ಮ ಮಗಳ ನಟನೆ ಬಗ್ಗೆ ಟ್ವೀಟ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ.

https://twitter.com/MandannaSuman/status/1155858466331697153

ಡಿಯರ್ ಲಲ್ಲಿ, ನೀನು ನಿನ್ನ ಪೋಷಕರು ಹೆಮ್ಮೆ ಪಡುವಂತೆ ಮಾಡಿದ್ದೀಯಾ.. ನೀನು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ನೀನು ಮಿನುಗುತ್ತಿದ್ದೀಯಾ..? ಐ ಲವ್ ಯು ಬೇಬಿ. ವಿಜಯ ನೀವು ಕೂಡ ಅದ್ಬುತವಾಗಿ ಅಭಿನಯಿಸಿದ್ದೀರಿ.. ಆಲ್ ದಿ ಬೆಸ್ಟ್ ಎಂದು ಸುಮನ್ ಮಂದಣ್ಣ ಟ್ವೀಟ್ ಮಾಡಿದ್ದಾರೆ. ರಶ್ಮಿಕಾ ಅಭಿಮಾನಿಗಳು ಅಮ್ಮನ ಟ್ವೀಟಿಗೆ ಹರ್ಷ ವ್ಯಕ್ತಪಡಿಸಿದ್ದು, ಮತ್ತೂ ಕೆಲವರು ಇತ್ತೀಚಿಗೆ ರಶ್ಮಿಕಾ ವಿವಾದದ ಕುರಿತು ಮಾತನಾಡಿ ಮಗಳಿಗೆ ಸರಿಯಾಗಿ ಬುದ್ಧಿ ಕಲಿಸಿ.. ಎಂದೂ ಖಾರವಾಗಿ ಕಮೆಂಟುಗಳನ್ನು ಮಾಡಿದ್ದಾರೆ.

ಇನ್ನಷ್ಟು ಓದಿರಿ

Scroll to Top