ಅನುಷ್ಕಾ ಶೆಟ್ಟಿ ಕನ್ನಡ ಪ್ರೇಮ!

Picture of Cinibuzz

Cinibuzz

Bureau Report

ಒಂದೆಡೆ ಕನ್ನಡತಿಯಾಗಿ ಹುಟ್ಟಿ ಕನ್ನಡದ ಅನ್ನವನ್ನು ತಿನ್ನುತ್ತ ಕನ್ನಡದ ಸಿನಿಮಾಗಳಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡರೂ ಸಹ ನನಗೆ ಕನ್ನಡ ಸರಿಯಾಗಿ ಬರೋದಿಲ್ಲ ಅಂತ ಡವ್ ಮಾಡುವ ಕಿರಿಕ್ ರಶ್ಮಿಕಾ. ಮತ್ತೊಂದೆಡೆ ಕನ್ನಡತಿಯಾಗಿ ಹುಟ್ಟಿ ಕನ್ನಡದ ಸಿನಿಮಾಗಳಲ್ಲಿ ನಟಿಸದಿದ್ದರೂ ಸಹ ಕನ್ನಡ ಪ್ರೇಮವನ್ನು ಮೆರೆಯುವ ಅನುಷ್ಕಾ ಶೆಟ್ಟಿ.

ಯೋಗ ಯೋಗ್ಯತೆ ಇದ್ದವರಿಗೆ ಮಾತ್ರ ಕನ್ನಡದ ವ್ಯಾಲ್ಯೂ ಏನು ಅನ್ನೋದು ಗೊತ್ತಾಗುತ್ತೆ  ಎಂಬುದನ್ನು ಅನುಷ್ಕಾ ಶೆಟ್ಟಿ ನೋಡಿ ರಶ್ಮಿಕಾ ಕಲಿಯಬೇಕು. ತೆಲುಗು, ತಮಿಳಿನಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿರುವ ಅನುಷ್ಕಾ ಶೆಟ್ಟಿ ಎಲ್ಲೇ ಇದ್ದರೂ ಕನ್ನಡತನವನ್ನು ಬಿಟ್ಟುಕೊಡದೇ ಕನ್ನಡವನ್ನು ಮರೆಯದೇ ಉಸಿರಾಗಿಸಿಕೊಂಡಿದ್ದಾರೆ ಅನ್ನೋದು ಆಕೆಯ ಕೆಲಸದಿಂದ ಸಾಬೀತಾಗಿದೆ.

ಆದದ್ದಾದರೂ ಏನಂದ್ರೆ ಇಂದು ಅನುಷ್ಕಾ ಶೆಟ್ಟಿ ತಾಯಿಯವರ ಹುಟ್ಟುಹಬ್ಬದ ಸಂಭ್ರಮ. ಈ ಮಧ್ಯೆ ಅನುಷ್ಕಾ ತಮ್ಮ ಫೇಸ್ ಬುಕ್ ಖಾತೆಯಲ್ಲಿ ತನ್ನ ತಾಯಿಗೆ ಕನ್ನಡದಲ್ಲಿಯೇ ”ಜನ್ಮದಿನದ ಹಾರ್ದಿಕ ಶುಭಾಶಯಗಳು ಅಮ್ಮ” ಎಂದು ಶುಭಾಶಯ ಕೋರುವ ಮೂಲಕ ಕನ್ನಡಿಗರ ಮನ ಗೆದ್ದಿರುವ ಜತೆಗೆ ಮಾದರಿಯೂ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಕನ್ನಡವನ್ನೇ ಬಳಸುವ ಅನುಷ್ಕಾ ಶೆಟ್ಟಿ ಯಾವುದೇ ಕಾರ್ಯಕ್ರಮಗಳಲ್ಲಿ ಆದರೂ ಕನ್ನಡ ಮಾಧ್ಯಮ ಮಿತ್ರರು ಕಂಡರೆ ಕನ್ನಡದಲ್ಲಿಯೇ ಮಾತನಾಡಿ ಮುದ್ದಾದ ನಗೆಯನ್ನು ಬೀರುತ್ತಾರೆ. ತುಂಬಿದ ಕೊಡ ತುಳುಕೋದಿಲ್ಲ ಅಂತ ಹೇಳೋದು ಇಂತಹವರಿಗೆ ಇರಬೇಕು.

ಇನ್ನಷ್ಟು ಓದಿರಿ

Scroll to Top