ತಮಿಳಿನ ಜಿಗರ್ ಥಂಡ ತೆಲುಗಿಗೆ ರಿಮೇಕ್!

Picture of Cinibuzz

Cinibuzz

Bureau Report

ಕಾಲಿವುಡ್ ನಲ್ಲಿ ಸೂಪರ್ ಹಿಟ್ ಆಗಿದ್ದ ಜಿಗರ್ ಥಂಡ ಸಿನಿಮಾ ಇದೀಗ ತೆಲುಗಿಗೆ ರಿಮೇಕ್ ಆಗುತ್ತಿದೆ. ಚಿತ್ರಕ್ಕೆ ವಾಲ್ಮೀಕಿ ಎಂದು ಹೆಸರಿಡಲಾಗಿದ್ದು, ಹರೀಶ್ ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ. ಮೂಲ ಸಿನಿಮಾದಲ್ಲಿ ಸಿದ್ಧಾರ್ಥ್ ನಿರ್ವಹಿಸಿದ್ದ ಪಾತ್ರವನ್ನು ಅಥರ್ವ ಮುರಳಿ ನಿಭಾಯಿಸಲಿದ್ದು, ಇದು ಅವರಿಗೆ ಚೊಚ್ಚಲ ತೆಲುಗು ಚಿತ್ರ ಕೂಡ. ಇನ್ನು  ಇನ್ನು ಲಕ್ಷ್ಮಿ ಮೆನನ್ ನಿರ್ವಹಿಸಿದ್ದ ಪಾತ್ರವನ್ನು ಪೂಜಾ ಹೆಗ್ಡೆ ಮಾಡಲಿದ್ದಾರೆ. ವಿಶೇಷವೆಂದರೆ ಇದೇ ಸಿನಿಮಾ ಹಿಂದಿಯಲ್ಲಿಯೂ ರಿಮೇಕ್ ಆಗಲಿದೆ ಎಂಬ ಸುದ್ದಿಯೂ ಹರಿದಾಡುತ್ತಿದ್ದು, ಅಜಯ್ ದೇವಗನ್ ನಿರ್ಮಾಣ ಮಾಡಲಿದ್ದಾರಂತೆ.

ಅಲ್ಲದೇ ಬಾಬ್ಬಿ ಸಿಂಹ ಪಾತ್ರವನ್ನು ಸಂಜಯ್ ದತ್ ಹಾಗೂ ಸಿದ್ಧಾರ್ಥ್ ನಿರ್ವಹಿಸಿದ್ದ ಪಾತ್ರವನ್ನು ಕಾರ್ತಿಕ್ ಆರ್ಯನ್ ನಿಭಾಯಿಸಲಿದ್ದು, ಲಕ್ಷ್ಮೀ ಮೆನನ್ ಪಾತ್ರವನ್ನು ತಮನ್ನಾ ಮಾಡಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ತಮಿಳಿನ ಜಿಗರ್ ಥಂಡ ಸೂಪರ್ ಹಿಟ್ ಆಗಿದ್ದಲ್ಲದೇ ಅತ್ಯುತ್ತಮ ಪೋಷಕ ನಟ ಹಾಗೂ ಅತ್ಯುತ್ತಮ ಸಂಕಲನ ಪ್ರಶಸ್ತಿಗಳನ್ನು ಗಳಿಸಿತ್ತು.

ಇನ್ನಷ್ಟು ಓದಿರಿ

Scroll to Top