ವಿವಾದಗಳಿಂದ ಹೊರಬಂದ ಡಿಯೋಲ್!

Picture of Cinibuzz

Cinibuzz

Bureau Report

ಸಂಸದರಾಗುತ್ತಿದ್ದಂತೆ ಸಾಕಷ್ಟು ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಸನ್ನಿ ಡಿಯೋಲ್ ಮೊದಲ ಬಾರಿಗೆ ಜನ ಮೆಚ್ಚುವ ಕೆಲಸ ಮಾಡಿ ವಿವಾದಗಳಿಂದ ಹೊರಬಂದಿದ್ದಾರೆ. ಯೆಸ್.. ಗುಲಾಮಗಿರಿ ಮತ್ತು ವೇಶ್ಯಾವಾಟಿಕೆಯ ಜಾಲಕ್ಕೆ ತಗುಲಿಕೊಳ್ಳುತ್ತಿದ್ದ ಗುರುದಾಸ್ ಪುರದ ಮಹಿಳೆಯೊಬ್ಬರನ್ನು ಸನ್ನಿ ಡಿಯೋಲ್ ರಕ್ಷಿಸುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ರಿಯಲ್ ಹೀರೋ ಆಗಿದ್ದಾರೆ. ಅಲ್ಲದೇ ಈ ವಿಚಾರ ಟ್ವಿಟರ್ ನಲ್ಲಿ ಸಾಕಷ್ಟು ಚರ್ಚೆಯಾಗಿದ್ದು, ‘ಅಂತೂ ಸನ್ನಿ ಡಿಯೋಲ್‌ ಒಳ್ಳೆಯ ಕೆಲಸ ಮಾಡಿದ್ದಾರೆ’, ‘ವಿವಾದಗಳಿಂದ ಹೊರಬಂದ ಡಿಯೋಲ್‌’ ಎಂದು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.

45 ವರ್ಷದ ವೀಣಾ ಬೇಡಿ ಅವರಿಗೆ 30 ಸಾವಿರಕ್ಕೆ ಮನೆಕೆಲಸ ಕೊಡಿಸುವುದಾಗಿ ನಂಬಿಸಿ ಪಾಕಿಸ್ತಾನ ಮೂಲದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಲಾಗಿತ್ತು. ಕರ್ತಾರ್‌ಪುರಕ್ಕೆ ಸನ್ನಿ ಡಿಯೋಲ್‌ ಭೇಟಿ ನೀಡಿದ್ದ ಸಂದರ್ಭದಲ್ಲಿ ಆಕೆಯನ್ನು ಹುಡುಕಿಕೊಡುವಂತೆ ಸಂಬಂಧಿಕರು ಮನವಿ ಮಾಡಿದ್ದರು. ಎನ್‌ಜಿಒ ಹಾಗೂ ಪೊಲೀಸರ ಸಹಾಯ ಪಡೆದುಕೊಂಡು ಆಕೆಯನ್ನು ಹುಡುಕಲಾಗಿದೆ. ವೀಣಾ ಮನೆಗೆ ತಲುಪಿದ ಬಳಿಕ ಕುಟುಂಬದವರು ಸನ್ನಿ ಡಿಯೋಲ್‌ಗೆ ಧನ್ಯವಾದ ಹೇಳಿದ್ದಾರೆ. ಇನ್ನಾದರೂ ಸನ್ನಿ ಡಿಯೋಲ್ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳದೇ ಇಂತಹುದೇ ದಾರಿಯಲ್ಲಿ ಸಾಗುವಂತಾಗಲಿ.

ಇನ್ನಷ್ಟು ಓದಿರಿ

Scroll to Top