ಭಾನು-ಭೂಮಿ ಮದುವೆಯಲ್ಲಿ ರಂಗಾಯಣ ಸಾಂಗು!

Picture of Cinibuzz

Cinibuzz

Bureau Report

ಭಾನು ವೆಡ್ಸ್ ಭೂಮಿ ಚಿತ್ರದ ಈ ಚಿತ್ರದ ಮುಖ್ಯವಾದ ವಿಶೇಷವೊಂದಿದೆ. ಈವರೆಗೆ ಪ್ರೇಕ್ಷಕರನ್ನು ತನ್ನ ವಿಶೇಷ ವಾಕ್ಚಾತುರ್ಯದ  ಮೂಲಕವೇ ನಗಿಸುತ್ತಿದ್ದ, ನಟ ರಂಗಾಯಣ ರಘು  ಈಗ  ತಮ್ಮ   ಕಂಠದ ಮೂಲಕ ಗಾಯಕರಾಗಿದ್ದಾರೆ.  ಗೌಸ್‌ಪೀಸ್  ಅವರ  ಸಾಹಿತ್ಯದಲ್ಲಿ  ಮೂಡಿಬಂದಿರುವ ಕಲರ್ ಕಲರ್ ಕನಸುಗಳು ಎಂಬ ಗೀತೆಯನ್ನು ರಘು ಹಾಡಿದ್ದಾರೆ.

“ಹಾಡಬೇಕೆಂಬುದು  ನನ್ನ ಆಸೆ ಆಗಿರಲಿಲ್ಲ, ಗೆಳೆಯ ಶೋಭರಾಜ್  ಮಾಡಿದ ಒತ್ತಾಯದ ಕಾರಣ   ಈ ಹಾಡನ್ನು ಕೇವಲ ಎರಡೇ ಗಂಟೆಗಳಲ್ಲಿ  ರೆಡಿಯಾಗಿ  ಹಾಡಿದ್ದೇನೆ.  ಹೇಗಿದೆ ಎಂದು  ನಮ್ಮ ಜನ ಹೇಳಬೇಕು  ಎಂದು ಹೇಳಿದರು.  ಬೆಳಗಾಂ ಮೂಲದ ಕಿಶೋರ್ ಶೆಟ್ಟಿ  ಇದೇ ಮೊದಲ ಬಾರಿಗೆ   ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.  ಈ ಚಿತ್ರದಲ್ಲಿ  ಐದು ಹಾಡುಗಳಿದ್ದು ಎಲ್ಲಾ  ಮೆಲೋಡಿಯಾಗಿವೆ  ಎ.ಎಂ. ನೀಲ್ ಈ ಹಾಡಿಗೆ ಸಂಗೀತ ಒದಗಿಸಿದ್ದಾರೆ.  ಗಣೇಶ್ ಹೆಗಡೆ  ಚಿತ್ರಕ್ಕೆ  ಕ್ಯಾಮೆರಾ  ಹಿಡಿದಿದ್ದಾರೆ.

ಸಂಕಲನ- ಶ್ರೀನಿವಾಸ್ ಪಿ ಬಾಬು, ನಿರ್ವಹಣೆ – ಗಂಡಸಿ ರಾಜು, ತಾರಾಗಣದಲ್ಲಿ – ಸೂರ್ಯಪ್ರಭ್, ರಕ್ಷತಾ ಮಲ್ನಾಡ್. ಶೋಭರಾಜ್, ಗಿರೀಶ್, ಮೈಕೋ ಮಂಜು, ಸಿಲ್ವಾಮೂರ್ತಿ, ಹಂಸಾ, ಸೂರ್ಯಕಿರಣ್, ಪಲ್ಲವಿ ಶೆಟ್ಟಿ, ಹೆಚ್.ಎಂ.ಟಿ. ವಿಜಿ, ಪ್ರವೀಣ್, ಮಿಮಿಕ್ರಿ ರಾಜು, ಹಾಗೂ ವಿಶೇಷ ಪಾತ್ರದಲ್ಲಿ ರಂಗಾಯಣ ರಘು ಅಭಿನಯಿಸುತ್ತಿದ್ದಾರೆ.

ಇನ್ನಷ್ಟು ಓದಿರಿ

Scroll to Top