ಲಂಡನ್ ಗೆ ಹಾರಲಿದೆ ಬಾಹುಬಲಿ ಜೋಡಿ!

Picture of Cinibuzz

Cinibuzz

Bureau Report

ಟಾಲಿವುಡ್ ಸ್ವೀಟಿ ಅನುಷ್ಕಾ ಹಾಗೂ ಡಾರ್ಲಿಂಗ್ ಪ್ರಭಾಸ್ ಲಂಡನ್ ಗೆ ಹಾರುವ ಸಿಹಿ ಸುದ್ದಿಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ಹಾಗಂತ ಇದೇನು ಮದುವೆ ಮಾತುಕತೆಗೋ, ವೆಕೇಷನ್ನಿಗೋ ಹೋಗುತ್ತಿರುವ ಟ್ರಿಪ್ ಅಂತೂ ಅಲ್ಲ. ಈ ಜೋಡಿ ತಮ್ಮ ಚಿತ್ರದ ಪ್ರಚಾರಕ್ಕಾಗಿ ಲಂಡನ್ ಗೆ ತೆರಳಿದೆಯಂತೆ.

ಹೌದು.. ಇವರ ಅಭಿನಯದ ಬಾಹುಬಲಿ 2 ಚಿತ್ರವು ಲಂಡನ್ ನಲ್ಲಿ ಅಕ್ಟೋಬರ್ ಗೆ ಬಿಡುಗಡೆಯಾಗಲಿದ್ದು, ಅದರ ಪ್ರಚಾರದ ಸಲುವಾಗಿ ಲಂಡನ್ ಗೆ ಹೊರಡಲಿದೆ. ಸಾಹೋ ಸಿನಿಮಾ ಪ್ರಚಾರದ ಬ್ಯುಸಿಯಲ್ಲಿದ್ದರೂ ಪ್ರಭಾಸ್ ಅನುಷ್ಕಾ ಜತೆ ಲಂಡನ್ ಗೆ ಹೋಗಲು ಬಿಡುವು ಮಾಡಿಕೊಂಡಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಈ ಜೋಡಿಯ ಜತೆಗೆ ರಾಣಾ ಹಾಗೂ ನಿರ್ದೇಶಕ ರಾಜಮೌಳಿ ಕೂಡ ಜತೆಯಾಗಲಿದೆ ಎಂಬುದು ಸದ್ಯದ ಸುದ್ದಿ.

ಇನ್ನಷ್ಟು ಓದಿರಿ

Scroll to Top