ಭೂಲ್ ಭುಲೈಯಾ 2 ಗೆ ಸಾರಾ ಅಲಿ ಖಾನ್!

Picture of Cinibuzz

Cinibuzz

Bureau Report

ಅಕ್ಷಯ್ ಕುಮಾರ್ ನಟನೆಯ ಭೂಲ್ ಭುಲೈಯಾ ಸೀಕ್ವೆಲ್ ನ ಮತ್ತೊಂದು ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ. ಹಾಗಂತ ಈ ಚಿತ್ರವನ್ನು ಕಿಲಾಡಿ ಅಕ್ಷಯ್ ಕುಮಾರ ಅವರೇನು ಮಾಡುತ್ತಿಲ್ಲ. ಅಕ್ಷಯ್ ಪಾತ್ರವನ್ನು ಕಾರ್ತಿಕ್ ಆರ್ಯನ್ ಮಾಡಲಿದ್ದು, ನಾಯಕಿಯ ಪಾತ್ರಕ್ಕೆ ಸಾರಾ ಅಲಿ ಖಾನ್ ಅವರು ಆಯ್ಕೆಯಾಗುವ ಸಾಧ್ಯತೆ ಇದೆಯಂತೆ. ನಿರ್ಮಾಪಕರು ಸಹ ಇದೇ ನಟಿಯನ್ನೇ ಆಯ್ಕೆ ಮಾಡಿಕೊಳ್ಳಲು ಹವಣಿಸುತ್ತಿದ್ದು, ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಾರ ಅಲಿ ಖಾನ್ ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲವಂತೆ. ಈ ಚಿತ್ರವನ್ನು ಅನೀಸ್ ಬಸ್ಮೀ ನಿರ್ದೇಶನ ಮಾಡಲಿದ್ದಾರೆ.

ಇನ್ನು ಸಾರಾ ಅಲಿ ಖಾನ್ ಇಮ್ತಿಯಾಜ್ ಅಲಿ ಅವರ ನಿರ್ದೇಶನದ ಹೆಸರಿಡದ ಸಿನಿಮಾದಲ್ಲಿಯೂ ಕಾರ್ತಿಕ್ ಜೋಡಿಯಾಗಿ ನಟಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಹಾಗೂ ಸೈಫ್‌ ಅಲಿ ಖಾನ್ ನಟನೆಯ ‘ಲವ್‌ ಆಜ್‌ ಕಲ್‌’ ಸಿನಿಮಾದ ಮುಂದುವರಿದ ರೂಪ ಇದಾಗಿದೆ ಎಂದೂ ಹೇಳಲಾಗುತ್ತಿದೆ. ಈ ಸಿನಿಮಾಕ್ಕೆ ‘ಆಜ್‌ ಕಲ್‌’ ಎಂದು ಹೆಸರಿಡುವ ಸಾಧ್ಯತೆ ಕೂಡ ಇದೆಯಂತೆ. ಎಲ್ಲ ಅಂದುಕೊಂಡಂತೆ ಆದರೆ ಇದೇ ಜೋಡಿ ಭೂಲ್ ಭುಲೈಯಾ 2ನಲ್ಲಿಯೂ ಮಿಂಚುವ ಸಾಧ್ಯತೆ ಇದೆ.

ಇನ್ನಷ್ಟು ಓದಿರಿ

Scroll to Top