ಪಾತ್ರಗಳಿಗೆ ತನ್ನನ್ನು ಒಗ್ಗಿಸಿಕೊಳ್ಳಬಲ್ಲಂತಹ ಪ್ರತಿಭಾವಂತ ನಟರ ಪೈಕಿ ಶರ್ವಾನಂದ ಕೂಡ ಒಬ್ಬರು. ಅವರು ಹೊಸದಾಗಿ ನಟಿಸುತ್ತಿರುವ ರಣರಂಗಂ ಸಿನಿಮಾದಲ್ಲಿ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಈ ಚಿತ್ರವನ್ನು ಸುಧೀರ್ ವರ್ಮಾ ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ. ಜತೆಗೆ ಕಲ್ಯಾಣಿ ಪ್ರಿಯಾದರ್ಶನ್ ಹಾಗೂ ಕಾಜಲ್ ಅಗರ್ ವಾಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಈ ಚಿತ್ರದ ಮೊದಲರ್ಧದಲ್ಲಿ 25 ವರ್ಷದ ಪಾತ್ರದಲ್ಲಿ ಶರ್ವಾನಂದ ಕಾಣಿಸಿಕೊಳ್ಳಲಿದ್ದು, ಯುವತಿಯೊಬ್ಬಳ ಪ್ರೇಮದಲ್ಲಿ ಬೀಳಲಿದ್ದಾರಂತೆ. ಆ ಯುವತಿ ಪಾತ್ರವನ್ನು ಕಲ್ಯಾಣಿ ನಿರ್ವಹಿಸಲಿದ್ದು, ಈ ಭಾಗದಲ್ಲಿ ಪ್ರೀತಿ ಪ್ರೇಮ, ಹಾಗೂ ಸುತ್ತಲಿನ ಸಂದರ್ಭಗಳು ಒಬ್ಬ ವ್ಯಕ್ತಿಯನ್ನು ಹೇಗೆ ರೌಡಿಯಾಗಿ ಬೆಳೆಸಿತು ಎಂಬ ಕತೆಯೇ ರಣರಂಗಂ. ಎರಡನೇ ಭಾಗದಲ್ಲಿ 20 ವರ್ಷದ ನಂತರದ ಕತೆಯನ್ನು ಒಳಗೊಂಡಿದ್ದು, ಶರ್ವ 45 ವರ್ಷದ ವ್ಯಕ್ತಿಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಈ ಭಾಗದಲ್ಲಿ ಕಾಜಲ್ ಅಗರವಾಲ್ ಜೊತೆಯಾಗಲಿದ್ದು, ವೈದ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆಯೂ ‘ಮಳ್ಳಿ ಮಳ್ಳಿ ಇದಿ ರಾನಿ ರೋಜು’ ಚಿತ್ರದಲ್ಲಿ ಶರ್ವಾನಂದ ಅವರ ನಿಜವಯಸ್ಸಿಗಿಂತ ಜಾಸ್ತಿ ವಯಸ್ಸಿನ ಪಾತ್ರವನ್ನು ಮಾಡಿದ್ದರು. ಅದನ್ನು ಅಭಿಮಾನಿಗಳು ಮೆಚ್ಚಿದ್ದರು ಕೂಡ. ಅಂತಹುದೇ ವಿಭಿನ್ನ ಪಾತ್ರದಲ್ಲಿ ಮೂಡಿಬಂದಿರುವ ‘ರಣರಂಗಂ’ ಚಿತ್ರ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ.











































