ಸನ್ನಿಲಿಯೋನ್ ಪೋನ್ ನಂಬರ್ ತಂದ ಸಂಕಷ್ಟ!

Picture of Cinibuzz

Cinibuzz

Bureau Report

ಬಾಲಿವುಡ್ ನ ಹಾಟ್ ಬ್ಯೂಟಿ ಸನ್ನಿ ಲಿಯೋನ್ ಅಂದರೆ ಯಾರು ತಾನೇ ಕಣ್ಣರಳಿಸಿ ನೋಡಲಾರರು. ಮೊದಲೇ ನೀಲಿತಾರೆಯಾಗಿ ಆಕೆಯ ಸೌಂದರ್ಯವನ್ನು ಸವಿದಿರುವ ಪಡ್ಡೆ ಹೈಕಳು ಆಕೆಯ ಪ್ರತಿಯೊಂದು ಸಿನಿಮಾಗಳನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ನೋಡುವ ರೂಢಿ ಇದೆ. ಹಾಗಿದ್ದಾಗ ಚಿತ್ರವೊಂದರಲ್ಲಿ ಆಕೆ ತನ್ನ ಪೋನ್ ನಂಬರ್ ಕೊಟ್ಟರೆ ಬಿಡುವುದುಂಟೇ..

ಇಂಥದ್ದೇ ಒಂದು ಘಟನೆ ದೆಹಲಿಯಲ್ಲಿ ನಡೆದಿದೆ. ಹೌದು.. ಸನ್ನಿಲಿಯೋನ್ ರ ಮೊಬೈಲ್ ನಂಬರ್ ಎಂದು ತಿಳಿದುಕೊಂಡು ಅವರ ಕೆಲವು ಅಭಿಮಾನಿಗಳು ಸಿನಿಮಾದಲ್ಲಿ ಸನ್ನಿಲಿಯೋನ್ ಕೊಟ್ಟ ನಂಬರ್ ಗೆ ಕಾಲ್ ಮಾಡಿ ಮಾಡಿ ಸಾಕುಮಾಡಿದ್ದಾರೆ. ಜತೆಗೆ ಪುರುಸೊತ್ತಿಲ್ಲದೇ ಮೆಸೇಜು ವಿಡಿಯೋಗಳನ್ನು ಕಳಿಸಿದ್ದಾರೆ. ಆದರೆ ಆ ನಂಬರ್ ಸನ್ನಿಯದಾಗಿರದೇ ಮೂಲತಃ ದೆಹಲಿ ನಿವಾಸಿಯೊಬ್ಬರದಾಗಿದೆ. ಅವರಿಗೆ  ಪ್ರತಿದಿನ ಸನ್ನಿಲಿಯೋನ್ ಅವರನ್ನು ಕೇಳಿಕೊಂಡು ದಿನಕ್ಕೆ 100 ರಿಂದ 150 ರಷ್ಟು ಕರೆಗಳು ಬರುತ್ತಿವೆಯಂತೆ.

ಅಷ್ಟಕ್ಕೂ ಅವರಿಗೆ ಸಂಕಷ್ಟ ಎದುರಾದದ್ದು ಕೂಡ ಸನ್ನಿ ಲಿಯೋನ್ ಅವರಿಂದಲೇ. ಅರ್ಜುನ್ ಪಟಿಯಾಲ ಅವರ ಸಿನಿಮಾದಲ್ಲಿ ಸನ್ನಿ ಲಿಯೋನ್ ಸ್ಪೆಷಲ್ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದರು. ಆ ಹಾಡಿನಲ್ಲಿ ಸಿನಿಮಾದ ನಾಯಕನಿಗೆ ಮೊಬೈಲ್‌ ನಂಬರ್‌ ಕೊಡುವ ದೃಶ್ಯವಿದೆ. ಸ್ಕ್ರೀನ್‌ ಮೇಲೆ ಸ್ಪಷ್ಟವಾಗಿ ಕಾಣುವ ಆ ನಂಬರ್‌ ನಿಜವಾಗಲೂ ಸನ್ನಿಯದ್ದೇ ಎಂದು ಅಂದುಕೊಂಡಿರುವ ಅವರ ಅಭಿಮಾನಿಗಳು ಆ ನಂಬರ್‌ಗೆ ಕರೆ ಮಾಡಲು ಆರಂಭಿಸಿದ್ದಾರೆ. ಆರಂಭದಲ್ಲಿ ಇದು ತಮಾಷೆಯಾಗಿ ಕಂಡರೂ ಅದರ ಓನರ್ ಗಿದು ಅರಗಿಸಿಕೊಳ್ಳಲಾಗದ ನಿಭಾಯಿಸಲಾಗದ ತುತ್ತಾಗಿ ಪರಿಣಮಿಸಿದೆ. ಕರೆ ಮಾಡಿ ಸನ್ನಿಲಿಯೋನ್ ಎಂದರೆ ಅಸಭ್ಯವಾಗಿ ಮಾತನಾಡಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರಂತೆ. ಈ ಸಂಕಷ್ಟದಿಂದ ಪಾರಾಗಲು ಆ ವ್ಯಕ್ತಿ  ಅರ್ಜುನ್‌ ಪಟಿಯಾಲ ಸಿನಿಮಾ ತಂಡದ ವಿರುದ್ಧ ದೂರು ನೀಡಿದ್ದಾರಂತೆ. ಸಿನಿಮಾ ತಂಡದ ಬೇಜವಾಬ್ದಾರಿತನದಿಂದಾಗಿ ತಮಗೆ ಮಾನಸಿಕ ಕಿರುಕುಳ ಉಂಟಾಗಿದೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.

ಇನ್ನಷ್ಟು ಓದಿರಿ

Scroll to Top