ಕೋಕ ಕೋಲಾದಲ್ಲಿ ದೇಸಿ ಗರ್ಲ್ ಆದ ಸನ್ನಿ ಲಿಯೋನ್!

Picture of Cinibuzz

Cinibuzz

Bureau Report

ನೀಲಿತಾರೆಯಾಗಿ ಗುರುತಿಸಿಕೊಂಡು ಪಡ್ಡೆ ಹೈಕ್ಳಿಗೆ ತನ್ನ ಮೈಮಾಟದ ಸಿಹಿ ಹಂಚಿದ್ದ ಚೆಲುವೆ ಸನ್ನಿ ಲಿಯೋನ್. ಬಳಿಕ ಪೋರ್ನ್ ಜಗತ್ತನ್ನು ತೊರೆದು ಬಣ್ಣದ ಲೋಕಕ್ಕೂ ಎಂಟ್ರಿ ಕೊಟ್ಟ ಸನ್ನಿಲಿಯೋನ್ ಬೇಡಿಕೆಯಲ್ಲಿರುವ ನಟಿಯರಿಗೆ ಸೆಡ್ಡು ಹೊಡೆಯುವ ಮೂಲಕ ಸಾಕಷ್ಟು ಅವಕಾಶಗಳನ್ನು ತಮ್ಮದಾಗಿಸಿಕೊಂಡರು. ಸದ್ಯ ಪ್ರಸಾದ್ ತಾಟಿಕೇನಿ ನಿರ್ದೆಶನದ ಕಾಮಿಡಿ ಸಿನಿಮಾ ಕೋಕ ಕೋಲಾದಲ್ಲಿ ಸನ್ನಿ ಲಿಯೋನ್ ನಟಿಸುತ್ತಿದ್ದು, ದೇಸಿ ಗರ್ಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಕುರಿತು ಸ್ವತಃ ಮಾತನಾಡಿರುವ ಸನ್ನಿ,  ಸಾಮಾನ್ಯವಾಗಿ ಎಲ್ಲಾ ಸಿನಿಮಾಗಳಲ್ಲಿ ನಾನು ಧರಿಸುವ ವೆಸ್ಟರ್ನ್‌ ಉಡುಪುಗಳಿಂದ ನನಗೆ ಸ್ವಲ್ಪ ಬ್ರೇಕ್‌ ಸಿಕ್ಕಿದೆ ಎಂಬುದು ನನಗೆ ಸಂತೋಷದ ವಿಷಯ. ಅದರ ಜತೆಗೆ ನನಗೆ ಸೀರೆಯಿಂದರೆ ತುಂಬಾ ಇಷ್ಟ. ಈ ಉಡುಪು ಧರಿಸಿ ಕನ್ನಡಿ ಮುಂದೆ ನಿಂತುಕೊಳ್ಳುವುದು ನನಗೆ ಹೊಸಾನುಭವ ನೀಡಿದೆ ಎಂದಿದ್ದಾರೆ. ಈ ಸಿನಿಮಾಗಾಗಿ ಭೋಜ್‌ಪುರಿ ಭಾಷೆ ಕಲಿಯುತ್ತಿರುವ ಸನ್ನಿ, ಚಿತ್ರದಲ್ಲಿ ಪ್ರೇಕ್ಷ ಕರು ನನ್ನನ್ನು ಹೊಸ ಅವತಾರದಲ್ಲಿ ನೋಡಲಿದ್ದಾರೆ ಎಂದು ವಿವರಿಸಿದ್ದಾರೆ. ಈ ಚಿತ್ರದಲ್ಲಿ ಸನ್ನಿ ಲಿಯೋನ್‌ ದೇಸಿ ಉಡುಪು ಧರಿಸಿರುವ ಫೋಟೋಗಳು ಈಗಾಗಲೇ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಇನ್ನಷ್ಟು ಓದಿರಿ

Scroll to Top