ಇಲಿಯಾನ ಹಾಟ್ ಲುಕ್ಕಿಗೆ ಪಡ್ಡೆ ಹೈಕ್ಳ ದಿಲ್ ಖುಷ್!

Picture of Cinibuzz

Cinibuzz

Bureau Report

ಭಾರತದಾದ್ಯಂತ ತನ್ನ ವಿಭಿನ್ನ ಲುಕ್ಕು, ಬ್ಯೂಟಿ ಮೂಲಕ ನೋಡುಗರ ಕಣ್ಣು ತಂಪಾಗಿಸಿರುವ ಸುಂದರಿ ಇಲಿಯಾನ ಡಿಕ್ರೂಜ್. ತನ್ನ ಜೀರೋ ಸೈಜ್ ಫಿಗರ್ ನಟನೆಯ ಮೂಲಕವೇ ಪಡ್ಡೆ ಹೈಕ್ಳ ಮೈ ಬಿಸಿ ಏರಿಸುತ್ತಾರೆ. ಇತ್ತೀಚಿಗೆ ಇಲಿಯಾನ ತಮ್ಮ ಕೆಲವು ಹಾಟ್ ಬಿಕಿನಿ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಇಲಿಯಾನ ಸೌಂದರ್ಯಕ್ಕೆ ಮಾರುಹೋಗಿದ್ದಾರೆ.

https://www.instagram.com/p/BmbDTYyDs8Z/?utm_source=ig_web_copy_link

13 ವರ್ಷಗಳ ಹಿಂದೆ ಕಾಲಿವುಡ್ ನ ದೇವದಾಸ್ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಇಲಿಯಾನ ನಂತರ ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ತಮ್ಮದೇ ಆದ ಅಪರೂಪದ ನಟನೆಯ ಮೂಲಕ ಭರವಸೆಯ ನಾಯಕಿಯಾಗಿ ಹೊರಹೊಮ್ಮಿದ್ದರು. ಇನ್ನು ‘ಅಮರ್ ಅಕ್ಬರ್ ಅಂಥೋನಿ’ ಸಿನಿಮಾದಲ್ಲಿ ನಟಿಸುವ ಮೂಲಕ ಟಾಲಿವುಡ್​ಗೆ ಮರು ಪ್ರವೇಶಿಸಿದ್ದಾರೆ. ಸದ್ಯ ಅವರು ಬಿಕಿನಿ ಡ್ರೆಸ್​ನಲ್ಲಿರುವ ಫೋಟೊಗಳನ್ನು ತಮ್ಮ ಇನ್​​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, 10 ಲಕ್ಷಕ್ಕೂ ಹೆಚ್ಚು ಲೈಕ್​​ ಹಾಗೂ 7 ಸಾವಿರಕ್ಕೂ ಹೆಚ್ಚು ಕಾಮೆಂಟ್​ಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಇಲಿಯಾನ ಪೋಟೋಗಳು ಸದ್ದುಮಾಡುತ್ತಿವೆ.

ಇನ್ನಷ್ಟು ಓದಿರಿ

Scroll to Top