ದುಬಾರಿ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಿಯಾಂಕ ಚೋಪ್ರಾ!

Picture of Cinibuzz

Cinibuzz

Bureau Report

ಪ್ರಿಯಾಂಕ ಚೋಪ್ರಾ ಸಿನಿಮಾಕ್ಕಿಂತ ಇಲ್ಲಸಲ್ಲದ ವಿಚಾರಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಈಗೀಗ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಆಕೆಯ ಹೇರ್ ಸ್ಟೈಲ್ ನಿಂದ ಹಾಕುವ ಡ್ರೆಸ್ ನ ವರೆವಿಗೂ ಪ್ರಿಯಾಂಕ ಚೋಪ್ರಾ ಅವರನ್ನು ಟ್ರೋಲಿಗರು ಟ್ರೋಲ್ ಮಾಡುತ್ತಲೇ ಕಮೆಂಟಿಗರು ಕಮೆಂಟ್ ಮಾಡುತ್ತಲೇ ಇರುತ್ತಾರೆ.

ಇತ್ತೀಚಿಗಷ್ಟೇ ತಮ್ಮ 37 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಪ್ರಿಯಾಂಕ ಚೋಪ್ರಾ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ಪಿಂಕಿ ದುಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ಎಂಬುದೇ ಆ ಲೇಟೆಸ್ಟ್ ಸುದ್ದಿ. ಯೆಸ್.. ಕೆಂಪು ಬಣ್ಣದ ಗೌನ್ ಧರಿಸಿದ್ದ ಪ್ರಿಯಾಂಕ ಚೋಪ್ರಾ ಡ್ರೆಸ್ಸಿಗೆ ಹೊಂದುವಂತಹ ಗೋಲ್ಡನ್ ಹಾಗೂ ಕೆಂಪು ಮಿಶ್ರಿತ ಬಣ್ಣದ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು.

ಅವರು ಕತ್ತರಿಸಿದ್ದ ಕೇಕ್ ಮಿಯಾಮಿಯಾ ಪ್ರಸಿದ್ಧ ಬೇಕರಿಯೊಂದು 24 ಗಂಟೆಯಲ್ಲಿ ಅವರಿಗಾಗಿಯೇ ವಿಶೇಷವಾಗಿ ತಯಾರಿಸಿದ್ದಾಗಿತ್ತು. ಮೇಲಾಗಿ ಚಿನ್ನದ ಸ್ಪರ್ಶದೊಂದಿಗೆ ಚಾಕ್ ಲೇಟ್ ಹಾಗೂ ವೆನಿಲಾ ಮಿಶ್ರತ ಆ ಕೇಕ್ ನ ಬೆಲೆ ಬರೋಬ್ಬರಿ 3.45 ಲಕ್ಷವಾಗಿತ್ತಂತೆ. ಈ ಕೇಕನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಸಾಕಷ್ಟು ಮಂದಿ ಒಂದು ದಿನದ ಹುಟ್ಟುಹಬ್ಬಕ್ಕಾಗಿ ಬರೋಬ್ಬರಿ 3.45 ಲಕ್ಷವನ್ನು ವ್ಯಯ ಮಾಡಿರುವ ಕುರಿತಾಗಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಪತಿ ನಿಕ್‌ ಜೋನಸ್‌ ಹಾಗೂ ಅವರ ಕುಟುಂಬದವರು ಮಿಯಾಮಿಯ ಕಡಲ ತೀರದಲ್ಲಿ ಪ್ರಿಯಾಂಕಾ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದರು.

ಇನ್ನಷ್ಟು ಓದಿರಿ

Scroll to Top