ಮಧುಮಗಳ ವೇಷದಲ್ಲಿ ಯಾಮಿ ಗೌತಮ್!

Picture of Cinibuzz

Cinibuzz

Bureau Report

ಕನ್ನಡದ ಉಲ್ಲಾಸ ಉತ್ಸಾಹ ಚಿತ್ರದ ಮುಖೇನ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಬಾಲಿವುಡ್ ಜನಪ್ರಿಯ ನಟಿ ಯಾಮಿ ಗೌತಮ್. ಸಾಕಷ್ಟು ವಿಶಿಷ್ಟವಾದ ಪಾತ್ರಗಳ ಮೂಲಕವೇ ಹೆಚ್ಚು ಗುರುತಿಸಿಕೊಂಡಿರುವ ಯಾಮಿ ಗೌತಮ್ ಕನ್ನಡ, ತೆಲುಗು, ತಮಿಳು, ಹಿಂದಿ, ಮಲೆಯಾಳಂ ಭಾಷೆಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಉರಿ ಚಿತ್ರದಲ್ಲಿ ಗುಪ್ತಚರ ಇಲಾಖೆ ಅಧಿಕಾರಿಯಾಗಿ ನಟಿಸಿದ್ದ ಯಾಮಿ ಅಭಿನಯಕ್ಕೆ ಬರಪೂರ ಪ್ರತಿಕ್ರಿಯೆಗಳು ಲಭಿಸಿದ್ದವು.

https://www.instagram.com/p/B0gOJmUHxbC/?utm_source=ig_web_copy_link

ಸದ್ಯ ಹಾಸ್ಯ ಹಾಗೂ ಪ್ರೇಮಕತೆ ಮಿಶ್ರಿತ ಗಿನ್ನಿ ವೆಡ್ಸ್ ಸನ್ನಿ ಚಿತ್ರದಲ್ಲಿ ಅಭಿನಯಿಸುತ್ತಿರುವ ಯಾಮಿ ಮಧುಮಗಳ ಪೋಷಾಕು ತೊಟ್ಟಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಬೇಕಿದ್ದು, ತನ್ನ ಫಸ್ಟ್ ಲುಕ್ ಅನ್ನು ಸ್ವತಃ ಯಾಮಿ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಹಸಿರು ಬಣ್ಣದ ಗೆಟಪ್ ನಲ್ಲಿರುವ ಯಾಮಿ ನೋಡುಗರ ಕಣ್ಣು ಕುಕ್ಕುವಂತೆ ಕಾಣುತ್ತಿದ್ದಾರೆ.

ಇನ್ನಷ್ಟು ಓದಿರಿ

Scroll to Top