ಪೋರ್ಚುಗೀಸ್ ಕಥೆ ಹೇಳಲಿದ್ದಾರೆ ಮೋಹನ್ ಲಾಲ್!

Picture of Cinibuzz

Cinibuzz

Bureau Report

ಸಾಕಷ್ಟು ಬಾರಿ ನಿರ್ದೇಶಕನಾಗಬೇಕೆಂಬ ಹಂಬಲ ವ್ಯಕ್ತಪಡಿಸಿದ್ದ ಮೋಹನ್ ಲಾಲ್ ಕಡೆಗೂ ನಿರ್ದೇಶಕನಾಗಿ ಬಡ್ತಿ ಹೊಂದಿದ್ದಾರೆ. ಪೋರ್ಚುಗೀಸ್ ಕಥಾಹಂದರವನ್ನು ಹೊಂದಿರುವ ಬಾರೋಸ್ ಎಂಬ ಚಿತ್ರವನ್ನು ಮೋಹನ್ ಲಾಲ್ ನಿರ್ದೇಶನ ಮಾಡುತ್ತಿದ್ದಾರೆ.

‘ಬಾರೋಸ್‌’ ಸಿನಿಮಾದಲ್ಲಿ ವಾಸ್ಕೋಡಿಗಾಮನ ಪಾತ್ರದಲ್ಲಿ ಅಮರ್ಗೊ, ಹಾಗೂ ಆತನ ಪ್ರೇಮಿಯ ಪಾತ್ರದಲ್ಲಿ ಪಜ್‌ ವೇಗಾ  ನಿರ್ವಹಿಸಲಿದ್ದಾರೆ. ಬಾರೋಸ್‌ ಪಾತ್ರವನ್ನು ಸ್ವತಃ ಮೋಹನ್‌ಲಾಲ್‌ ಮಾಡಲಿದ್ದಾರೆ.  ಅಂತರಾಷ್ಟ್ರೀಯ ಸಿನಿಮಾದಲ್ಲಿ ಪಜ್‌ ವೇಗಾ ಹೆಸರು ಚಿರ‍ಪರಿಚಿತವಾಗಿದ್ದು, ಅವರು ’10 ಟೈಮ್ಸ್‌ ಆರ್‌ ಲೆಸ್‌’, ‘ದ ಸ್ಪಿರಿಟ್‌’ ಹಾಗೂ ‘ಏಂಜೆಲ್‌ ಆಫ್‌ ಎವಿಲ್‌’ ಸಿನಿಮಾಗಳ ಮೂಲಕ ಪ್ರಸಿದ್ಧರಾಗಿದ್ದಾರೆ. ರಫೇಲ್‌ ಅಮರ್ಗೊ ಜನಪ್ರಿಯ ಸ್ಪಾನಿಷ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ದುಬಾರಿ ಬಜೆಟ್ ನಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ವಾಸ್ಕೋಡಿಗಾಮ ಕಾಲದ ಸೆಟ್ ಹಾಕುವ ಪ್ಲ್ಯಾನ್ ಚಿತ್ರತಂಡದ್ದು.

ಇನ್ನಷ್ಟು ಓದಿರಿ

Scroll to Top