ತೂಕ ಏರಿಸಿಕೊಳ್ಳಲು ಜಾಹ್ನವಿ ಕಪೂರ್ ವರ್ಕ್ ಔಟ್!

Picture of Cinibuzz

Cinibuzz

Bureau Report

ಸಾಮಾನ್ಯರಂತೆ ಸೆಲೆಬ್ರೆಟಿಗಳು ತೂಕ ಏರಿಸಿಕೊಳ್ಳಲು ಇಳಿಸಿಕೊಳ್ಳಲು ಹೆಣಗಾಡಬೇಕಿಲ್ಲ. ಅವರು ಬೇಕೆಂದಾಗ ದಪ್ಪಗಾಗಲೂ ಬೇಕೆಂದಾಗ ಸಣ್ಣಗಾಗಲೂ ಸೆಲೆಬ್ರೆಟಿಗಳು ತಯಾರಿರುತ್ತಾರೆ. ಸದ್ಯ ತೂಕದ ವಿಚಾರಕ್ಕೆ ಸುದ್ದಿಯಲ್ಲಿರುವ ನಟಿ ಜಾಹ್ನವಿ ಕಪೂರ್.  ಈ ಮೊದಲು ಕಾರ್ಗಿಲ್ ಗರ್ಲ್ ಚಿತ್ರಕ್ಕಾಗಿ 6 ಕೆಜಿ ತೂಕ ಹೆಚ್ಚಿಸಿಕೊಂಡು ದಪ್ಪಗಾಗಿದ್ದ ಜಾಹ್ನವಿ ಹಾರರ್ ಕಾಮಿಡಿ ಸಿನಿಮಾ ರೂಹಿಅಫ್ಜಾ ಚಿತ್ರಕ್ಕಾಗಿ 10 ಕೆಜಿ ತೂಕವನ್ನು ಇಳಿಸಿಕೊಂಡಿದ್ದರು. ಸದ್ಯ ಕಾರ್ಗಿಲ್ ಗರ್ಲ್ ಉಳಿದ ಭಾಗದ ಚಿತ್ರೀಕರಣ ಜಾರ್ಜಿಯಾದಲ್ಲಿ ಶುರುವಾಗಿದ್ದು, ಜಾಹ್ನವಿ ವಾಪಸ್ ತೂಕ ಜಾಸ್ತಿ ಮಾಡಿಕೊಳ್ಳುವ ತರಾತುರಿಯಲ್ಲಿದ್ದಾರೆ. ಅಲ್ಲದೇ ತೂಕ ಹೆಚ್ಚಿಸಿಕೊಳ್ಳಲು ನಮ್ರತಾ ಪುರೋಹಿತ್ ಅವರ ಮಾರ್ಗದರ್ಶನವನ್ನು ಪಡೆಯುತ್ತಿದ್ದಾರೆ.

ಭಾರತೀಯ ವಾಯುಪಡೆಯ ಮೊದಲ ಮಹಿಳಾ ಕ್ಯಾಪ್ಟನ್ ಗುಂಜನ್ ಸಕ್ಸೇನಾ ಜೀವನಾಧಾರಿತ ಸಿನಿಮಾ ಇದಾಗಿದ್ದು, ಜಾಹ್ನವಿ ಕಪೂರ್ ಚಿತ್ರದ ಮೊದಲರ್ಧಕ್ಕಾಗಿ ಕೇವಲ 45 ದಿನಗಳಲ್ಲಿ 6 ಕೆಜಿ ತೂಕ ಜಾಸ್ತಿ ಮಾಡಿಕೊಂಡಿದ್ದರು. ಉಳಿದ ಭಾಗದ ಚಿತ್ರೀಕರಣಕ್ಕಾಗಿ ಜಾಹ್ನವಿ ತೂಕ ಕಳೆದುಕೊಳ್ಳುವಲ್ಲಿ ನಿರತರಾಗಿದ್ದಾರೆ.

ಇನ್ನಷ್ಟು ಓದಿರಿ

Scroll to Top