ನರೇಂದ್ರ ಮೋದಿಯವರ ಫಿಟ್ ಇಂಡಿಯಾ ಅಭಿಯಾನಕ್ಕೆ ಬಾಲಿವುಡ್ ಮಂದಿ ಅಗತ್ಯಕ್ಕಿಂತ ಹೆಚ್ಚಾಗಿಯೇ ಸಾಥ್ ಕೊಡುತ್ತಿದ್ದಾರೆ. ಒಂದೆಡೆ ಸಲ್ಮಾನ್ ಖಾನ್ ತಮ್ಮದೇ ಬ್ರ್ಯಾಂಡಿನ ಜಿಮ್ ಇಕ್ವಿಪ್ ಮೆಂಟ್ ಗಳನ್ನು ಪ್ರಮೋಟ್ ಮಾಡುತ್ತಿದ್ದರೆ, ಫಿಟ್ ಇಂಡಿಯಾ ಆಂಧೋಲನದ ರಾಯಭಾರಿಯಾಗಿರುವ ಸೋನು ಸೂದ್ ವಿಭಿನ್ನ ಶೈಲಿಯಲ್ಲಿಯೇ ಕೊಡುಗೆಗಳನ್ನು ನೀಡಿದ್ದಾರೆ.

ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಮುಂಬೈ, ನಾಗಪುರ, ದೆಹಲಿ, ಪಂಬಾಜ್ ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಫಿಟ್‌ನೆಸ್ ಕ್ರೇಜ್ ಇರುವ 100ಕ್ಕೂ ಹೆಚ್ಚು ಜನರಿಗೆ ಅಲ್ಲಿರುವ ಅತ್ಯುತ್ತಮ ಜಿಮ್‌ಗಳಲ್ಲಿ ಒಂದು ವರ್ಷದ ಸದಸ್ಯತ್ವವನ್ನು ಉಚಿತವಾಗಿ ಕೊಡಿಸಿದ್ದಾರೆ. ಈ ಕುರಿತು ಸಂತಸ ವ್ಯಕ್ತಪಡಿಸಿರುವ ಸೋನು ಸೂದ್ ‘ಫಿಟ್ ನೆಸ್ ಕಾಳಜಿ ಇದ್ದರೂ ಹಣವಿಲ್ಲದೇ ಜಿಮ್‌ಗೆ ಹೋಗಲು ಸಾಧ್ಯವಾಗದ ಅನೇಕರಿಗೆ ಇದರಿಂದ ಪ್ರಯೋಜನವಾಗಲಿದೆ. ಒಂದು ವರ್ಷ ಉಚಿತ ಸದಸ್ಯತ್ವ ಸಿಕ್ಕರೆ ಮುಂದಿನ ದಿನಗಳಲ್ಲಿ ಅವರು ವ್ಯಾಯಾಮ ಮುಂದುವರಿಸುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ನನ್ನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಿಲ್ಲ’ ಎಂದು ಹೇಳಿದ್ದಾರೆ.











































