ದಾಂಪತ್ಯ ಕಡಿದುಕೊಂಡ ದಿನಾ ಮಿರ್ಜಾ!

Picture of Cinibuzz

Cinibuzz

Bureau Report

ಬಿ ಟೌನಿನ ನಿರ್ಮಾಪಕಿ ದಿಯಾ ಮಿರ್ಜಾ ಹಾಗೂ ಸಾಹಿಲ್ ಸಂಘಾ ಅವರ ದಾಂಪತ್ಯ ಜೀವನ ಕೊನೆಯಾಗಿದೆ. ಈ ಬಗ್ಗೆ ಸ್ವತಃ ದಿಯಾ ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದಾರೆ.

11 ವರ್ಷದ ಹಿಂದೆ ದಿಯಾ ಹಾಗೂ ಸಾಯಿಲ್ ಪರಿಚಯಗೊಂಡು, ಇಬ್ಬರ ನಡುವೆ ಪ್ರೇಮಾಂಕುರವಾಗಿ 2014ರಲ್ಲಿ ವಿವಾಹವಾಗಿದ್ದರು. ಆದರೆ ಕೌಟುಂಬಿಕ ಕಾರಣಗಳಿಂದ  ಇಬ್ಬರೂ ದಾಂಪತ್ಯವನ್ನು ಕಡಿದುಕೊಂಡಿದ್ದಾರೆ. ಬರುವ ದಿನಗಳಲ್ಲಿ ಗೆಳೆಯರಾಗಿರುತ್ತೇವೆ ಎಂದು ಹೇಳಿಕೊಂಡಿರುವ ದಿಯಾ, ‘ನಾವು ವಿಚ್ಛೇದನ ಪಡೆದುಕೊಂಡಿದ್ದರೂ ಗೆಳೆಯರಾಗಿರುತ್ತೇವೆ. ನಮ್ಮ ಪ್ರೀತಿ ಹೀಗೆಯೇ ಮುಂದುವರಿಯಲಿದೆ. ನಾವು ಅನಿವಾರ್ಯವಾಗಿ ಬೇರೆ ಮಾರ್ಗ ತುಳಿಯಬೇಕಿದೆ. ನಿರಂತರವಾಗಿ ಪ್ರೀತಿ ಹಾಗೂ ಬೆಂಬಲ ತೋರಿಸುತ್ತಿರುವ ಕುಟುಂಬ, ಗೆಳೆಯರು ಹಾಗೂ ಮಾಧ್ಯಮದವರಿಗೆ ಧನ್ಯವಾದ’ ಎಂದು ಬರೆದುಕೊಂಡಿದ್ದಾರೆ.

ಇನ್ನಷ್ಟು ಓದಿರಿ

Scroll to Top